Weekly Horoscope: ತುಲಾ, ಮಿಥುನ ರಾಶಿಗೆ ಅದೃಷ್ಟದ ವಾರ, ಕಟಕಕ್ಕೆ ಸಂಕಷ್ಟ

By Suvarna News  |  First Published Mar 6, 2022, 5:00 AM IST

ತಾರೀಖು 6ರಿಂದ 12 ಮಾರ್ಚ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ


ಮೇಷ(Aries)
ಉದ್ಯೋಗ ಚುರುಕಿನಿಂದ ಸಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂದರ್ಭವಿದು. ಓದಿನಲ್ಲಿ ಆಸಕ್ತಿ ಹೆಚ್ಚುವ ಜೊತೆಗೆ ಏಕಾಗ್ರತೆಯೂ ಹೆಚ್ಚುವುದು. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ ಬರಲಿದೆ. ಸ್ವಂತ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ಬರುತ್ತದೆ. ಬಲ ವೃದ್ಧಿಯಾಗಲಿದೆ. ಕೆಲಸ ಅಂದುಕೊಂಡಿದ್ದಕ್ಕಿಂತ ಚೆನ್ನಾಗಾಗುತ್ತೆ. ಸಂಗಾತಿಯ ವಿಚಾರದಲ್ಲಿ ಕೊಂಚ ಕಸಿವಿಸಿ ಇರಬಹುದು. ಅಹಂ ಬಿಡಲು ಪ್ರಯತ್ನಿಸಿ.

ವೃಷಭ(Taurus)
ಭೂಮಿ ವಿಚಾರದಲ್ಲಿ ಯೋಜನೆ ರೂಪಿಸುವಿರಿ. ನೆಮ್ಮದಿ, ಶಾಂತಿ ಇರುತ್ತದೆ. ಸರ್ವ ಕಾರ್ಯದಲ್ಲೂ ಜಯವಾಗುವುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕೆಲಸಕ್ಕೆ ಸಂಬಂಧಿಸಿ ಹೊಸ ಅವಕಾಶಗಳು ಬರುತ್ತವೆ. ಬದಲಾವಣೆಯಾಗುತ್ತದೆ, ಇದರಿಂದ ಶುಭವೇ ಆಗುತ್ತದೆ. ಇದೊಂಥರ ಭಾಗ್ಯೋದಯದ ಕಾಲ ಎಂದು ಹೇಳಬಹುದು. ಉದ್ಯೋಗಿಗಳಿಗೆ, ಸ್ವಂತ ಉದ್ಯೋಗದಲ್ಲಿರುವವರಿಗೆ ಶುಭಫಲವಿದೆ.

Tap to resize

Latest Videos

undefined

ಮಿಥುನ(Gemini)
ಇಷ್ಟು ದಿನದ ಬೇಸರ, ಆತಂಕ, ಅನುಮಾನ ಇವೆಲ್ಲ ನಿವಾರಣೆಯಾಗುವ ಸುಸಂದರ್ಭ ಬಂದಿದೆ. ಅದೃಷ್ಟ ಈ ವಾರದಲ್ಲಿ ಕೈ ಹಿಡಿಯಲಿದೆ. ಬಹಳ ದಿನಗಳಿಂದ ಕಷ್ಟಪಟ್ಟ ಕೆಲಸಗಳಿಗೆಲ್ಲ ಈ ವಾರ ಫಲ ಸಿಗಲಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಈ ಬಾರಿ ಧನಪ್ರಾಪ್ತಿಯಾಗುವುದು. ನಿಮ್ಮಲ್ಲಿ ಕೆಲಸದ ಸಾಮರ್ಥ್ಯ ಹೆಚ್ಚಲಿದೆ. ಅದಕ್ಕೆ ಫಲ ಸಹ ಹೆಚ್ಚಾಗಲಿವೆ. ಉದ್ಯೋಗದಲ್ಲಿರುವವರಿಗೆ ಉತ್ತಮ ಫಲವಿದೆ.

Budh Gochar: ಕುಂಭ ರಾಶಿಗೆ ಬುಧನ ಪ್ರವೇಶ, ಇನ್ನು ಬದಲಾಗಲಿದೆ ಈ ರಾಶಿಗಳ ಅದೃಷ್ಟ

ಕಟಕ(Cancer)
ಹಣಕಾಸಿನ ವಿಚಾರದಲ್ಲಿ ಬೇಸರ ಉಂಟಾಗಬಹುದು. ಹಣದ ವಿಚಾರದಲ್ಲಿ ಕಷ್ಟಗಳು ಬರುತ್ತವೆ. ಸೂಚನೆ ಕೊಡದೇ ಬೇರೆ ಬೇರೆ ಖರ್ಚು ಬರಬಹುದು. ನಷ್ಟಗಳು ಉಂಟಾಗಬಹುದು. ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಜ್ವರ, ರಕ್ತಹೀನತೆ, ವಿಪರೀತ ಸುಸ್ತು ಉಂಟಾಗಬಹುದು. ಬೇಡವಾದ ಯೋಚನೆಗಳು ಹೆಚ್ಚೆಚ್ಚು ಬರಬಹುದು. ಭವಿಷ್ಯದ ಚಿಂತೆ ಕಾಡಬಹುದು. ಶಿವ ಪಂಚಾಕ್ಷರಿ ಮಂತ್ರ ಪಠಿಸಿ.

ಸಿಂಹ(Leo)
ನಿಮ್ಮ ಹಣಕಾಸಿನ ಸಮಸ್ಯೆ ಕಡಿಮೆಯಾಗುವ ದಿನ ಬಂದಿದೆ. ಈವರೆಗೆ ನೀವನುಭವಿಸಿದ ಹೆಚ್ಚಿನೆಲ್ಲ ಹಣಕಾಸಿನ ಸಮಸ್ಯೆಗಳು ನಿಧಾನಕ್ಕೆ ನಿವಾರಣೆಯಾಗುತ್ತಾ ಹೋಗುತ್ತದೆ. ಕೆಲಸ ವಿಚಾರದಲ್ಲಿದ್ದ ಅಡೆತಡೆಗಳು ಕ್ರಮೇಣ ನಿವಾರಣೆಯಾಗುತ್ತಾ ಹೋಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗಬಹುದು. ದೈವಬಲ ನಿಮಗಿದೆ. ನೀವಂದುಕೊಂಡ ಕೆಲಸಗಳೆಲ್ಲ ಸಂಪೂರ್ಣವಾಗಲಿವೆ. ಉದ್ಯೋಗದಲ್ಲಿ ಉತ್ತಮ ಫಲವಿದೆ.

ಕನ್ಯಾ(Virgo)
ನಿಮ್ಮ ಕಷ್ಟದ ದಿನಗಳು ಮುಂದುವರಿಯಬಹುದು. ಮಾನಸಿಕವಾಗಿ, ದೈಹಿಕವಾಗಿ ಕುಗ್ಗುವ ಸನ್ನಿವೇಶಗಳು ಬರಬಹುದು. ನಿಮ್ಮ ಮನಸ್ಸು ದುರ್ಬಲವಾಗುತ್ತಾ ಹೋಗಬಹುದು. ಕಷ್ಟಗಳು ಬಂದಾಗ ಹೆಚ್ಚೆಚ್ಚು ಕುಗ್ಗಿ ಹೋಗಬಹುದು. ನಿದ್ರಾಹೀನತೆ ಬರಬಹುದು. ಅನಾರೋಗ್ಯ ಬಾಧಿಸಬಹುದು. ಧ್ಯಾನ, ಪ್ರಾಣಾಯಾಮ ನಿಮ್ಮ ಸಹಾಯಕ್ಕೆ ಬರಬಹುದು. ಉದ್ಯೋಗದಲ್ಲಿ ಕಿರಿಕಿರಿ, ಬೇಸರ ಉಂಟಾಗಬಹುದು.

Lucky Parents: ಈ ರಾಶಿಯ ಮಕ್ಕಳನ್ನು ಹೊಂದಿರೋರು ನಿಜವಾಗಿಯೂ ಲಕ್ಕಿ!

ತುಲಾ(Libra)
ಅದೃಷ್ಟ ಇದೀಗ ನಿಮ್ಮ ಕೈ ಹಿಡಿಯಲಿದೆ. ಭಗವಂತನ ಅನುಗ್ರಹ ನಿಮ್ಮ ಮೇಲಿರುತ್ತದೆ. ನಿಮ್ಮ ಕೆಲಸದಲ್ಲಿ ಸ್ವಂತ ಉದ್ಯೋಗ ಮಾಡುತ್ತಿದ್ದರೆ ಲಾಭ ಚೆನ್ನಾಗಿ ಬರುತ್ತದೆ. ಋಣ ಬಾಧೆ ಕಡಿಮೆ ಮಾಡುತ್ತೀರಿ. ಹಳೆಯ ಸಾಲ ತೀರಿಸುವಿರಿ. ಹಣದ ಉಳಿತಾಯ ಆಗುತ್ತದೆ. ಕೆಲಸ ಕಾರ್ಯಗಳು ವೇಗವಾಗಿ ಸಾಗುತ್ತವೆ. ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಶುಭ ಫಲ ಸಿಗಬಹುದು. ಅಯಾಸ, ತಲೆನೋವಿಂದ ಕಿರಿಕಿರಿ.

ವೃಶ್ಚಿಕ(Scorpio)
ಕೆಲಸದಲ್ಲಿ ವೇಗ ಹೆಚ್ಚಬೇಕು ಎಂಬ ಭಾವ ಹೆಚ್ಚಾಗಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಲಾಭ ಚೆನ್ನಾಗಿರುತ್ತದೆ. ಆದರೆ ಕಲಹ ಉಂಟಾಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ತುಂಬ ಉತ್ತಮ ಅಭಿವೃದ್ಧಿ ಇದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದು. ಅನುಕೂಲಗಳು ಹೆಚ್ಚಾಗಬಹುದು. ಈ ವಾರವಿಡೀ ಕೆಲಸದಲ್ಲಿ ಮುಳುಗಿರುತ್ತೀರಿ. ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು.

ಧನು(Sagittarius)
ಒಳಮನಸ್ಸಿನಲ್ಲಿ ನೂರೆಂಟು ಯೋಚನೆಗಳು ಬರುತ್ತವೆ. ಆದರೆ ಹೊರಗೆ ಅದ್ಯಾವುದನ್ನೂ ತೋರಿಸಿಕೊಳ್ಳುವುದಿಲ್ಲ. ಕೆಲಸ, ಭವಿಷ್ಯದ ಬಗ್ಗೆ ಋಣಾತ್ಮಕ ಯೋಚನೆಗಳು ಹೆಚ್ಚಬಹುದು. ಈ ನಕಾರಾತ್ಮಕತೆಯಿಂದ ಕೆಲಸಗಳು ಅಂದುಕೊಂಡ ಹಾಗೆ ಸಾಗುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಚೆನ್ನಾಗಿದೆ. ಸ್ವಂತ ಉದ್ಯೋಗದಲ್ಲಿರುವ ಉತ್ತಮ ಹಣಕಾಸಿನ ಫಲವಿದೆ. ಆದರೆ ಉದ್ಯೋಗಿಗಳಿಗೆ ಕಷ್ಟ ಹೆಚ್ಚಲಿದೆ.

Curses of Mahabharata: ಮಹಾಭಾರತದ ನಾಲ್ಕು ಶಾಪಗಳು ಇಂದಿಗೂ ಇವೆಯಂತೆ! ಯಾವುವು ಗೊತ್ತೆ?

ಮಕರ(Capricorn)
ನಿಮ್ಮ ರಾಶಿಯಲ್ಲಿ ಕುಜ ಉಚ್ಛನಾಗಿರುತ್ತಾನೆ. ಕೆಲವೊಂದು ವಿಚಾರದಲ್ಲಿ ಶುಭ, ಕೆಲವೊಂದರಲ್ಲಿ ಅಶುಭ ಫಲವಿದೆ. ಮಾತು, ಕೆಲಸ ಕೆಲವೊಮ್ಮೆ ಸರಿಯಾಗಬಹುದು, ಕೆಲವೊಮ್ಮೆ ತಪ್ಪಾಗಬಹುದು. ತಾಳ್ಮೆ ನಿಮಗೆ ಸ್ವಭಾವ ಸಹಜವಾಗಿ ಬಂದಿದೆ. ಆದರೆ ಈ ವಾರ ತಾಳ್ಮೆಯನ್ನೂ ಮೀರಿ ಕೋಪ, ಉದ್ವೇಗ ಹೆಚ್ಚಾಗಬಹುದು. ನೀವು ಸಿಡಿದೇಳುವ ಸಾಧ್ಯತೆ ಇದೆ. ನಿಮ್ಮ ಪ್ರಾಮಾಣಿಕತೆ, ಶ್ರಮಕ್ಕೆ ಇಂದಲ್ಲ ನಾಳೆ ಫಲ ಸಿಕ್ಕಿಯೇ ಸಿಗುತ್ತದೆ.

ಕುಂಭ(Aquarius)
ವಿದ್ಯಾರ್ಥಿಗಳಿಗೆ ಈ ವಾರ ಬಹಳ ಉತ್ತಮ ಅಭಿವೃದ್ಧಿ ಇದೆ. ನಿಮ್ಮ ಹುಮ್ಮಸ್ಸು ಹೆಚ್ಚಬಹುದು. ಮಕ್ಕಳ ವಿಚಾರದಲ್ಲಿ ಉತ್ತಮ ಫಲವಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಕೆಲಸ ಕೊಂಚ ನಿಧಾನವಾಗಬಹುದು. ಆದರೆ ಕೆಲಸಕ್ಕಿಂತ ಹೆಚ್ಚಿನ ಆದಾಯ ಗಳಿಸುವಿರಿ. ಬೇರೆಯವರ ಕೆಳಗೆ ಕೆಲಸ ಮಾಡುವವರಿಗೆ ಉತ್ತಮ ಫಲವಿದೆ. ಸರ್ಕಾರಿ ಕೆಲಸ ಮಾಡುವವರಿಗೆ ಜವಾಬ್ದಾರಿ, ಮರ್ಯಾದೆ ಹೆಚ್ಚಬಹುದು. ಶ್ರಮಕ್ಕೆ ತಕ್ಕ ಫಲ ಸಿಗಬಹುದು.

ಮೀನ(Pisces)
ಓಡಾಟ, ಪ್ರಯಾಣ ಹೆಚ್ಚಾಗಬಹುದು. ಧರ್ಮ ಕಾರ್ಯಗಳು, ದೇವಸ್ಥಾನ ಓಡಾಟ ಮಾಡುವಿರಿ. ಸಂಗಾತಿಯ ಜೊತೆಗೆ ಪ್ರಯಾಣ ಮಾಡುವಿರಿ. ಅಗತ್ಯ ಇರುವವರಿಗೆ ಕೈಲಾದ ಸಹಾಯ ಮಾಡುವಿರಿ. ವೈಯುಕ್ತಿಕ ಕೆಲಸಕ್ಕೆ ಹೆಚ್ಚಿನ ಸಮಯ ಹೊಂದಿಸುವಿರಿ. ಮಾಡಿದ ಕೆಲಸಕ್ಕೆ ಉತ್ತಮ ಫಲವಿದೆ. ಕೆಲವು ಕೆಲಸಗಳು ನಿಧಾನವಾಗಬಹುದು. ವಾರದ ಕೊನೆಗೆ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಮೂಡಬಹುದು. 

click me!