Weekly Horoscope: ಕಟಕಕ್ಕೆ ಹಣಕಾಸಿನ ವಂಚನೆ, ಕನ್ಯಾಗೆ ನೆಮ್ಮದಿ ಮರೀಚಿಕೆ

By Suvarna News  |  First Published Feb 27, 2022, 5:04 AM IST

ತಾರೀಖು 27 ಫೆಬ್ರವರಿಯಿಂದ 5 ಮಾರ್ಚ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ವೃಶ್ಚಿಕ ರಾಶಿಯವರ ಸ್ವಭಾವದಲ್ಲಿ ಬದಲಾವಣೆ, ಉಳಿದವರಿಗೆ ಈ ವಾರದ ಫಲ ಏನಿದೆ ನೋಡಿ


ಮೇಷ(Aries)
ಲಾಭ ಸಿಗುತ್ತೆ ಅನ್ನುವ ಆಸೆಯಲ್ಲಿ ಮುಂದೆ ಅದರಿಂದ ಬಾಧೆ ಪಡುವ ಸನ್ನಿವೇಶ ಬರಬಹುದು. ಹಣಕಾಸಿನ ವಿಚಾರದಲ್ಲಿ ಜಾಗೃತೆಯಿಂದಿರಿ. ತಂದೆಯ ಆರೋಗ್ಯ(health)ದಲ್ಲಿ ಏರುಪೇರು ಉಂಟಾಗಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಹಣಕಾಸಿನ ಲಾಭ(profit) ಚೆನ್ನಾಗಿದೆ. ನೀವು ದುಡಿದಿದ್ದನ್ನು ಈ ವಾರ ಹೂಡಿಕೆ ಮಾಡಲು ಪ್ರಯತ್ನಿಸುವಿರಿ. ಆದರೆ ಅದಕ್ಕಿದು ಸಕಾಲವಲ್ಲ. ಕೆಲಸ ಹೆಚ್ಚಾಗಬಹುದು.

ವೃಷಭ(Taurus)
ಕೆಲಸದಲ್ಲಿ ನಿಷ್ಠೆ ಹೆಚ್ಚಾಗಬಹುದು. ನಿಮ್ಮ ಸ್ಥಾನದಲ್ಲಿ ಬದಲಾವಣೆಯಾಗಿ ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಪಡೆಯುವಿರಿ. ಕೆಲಸದಲ್ಲಿ ಅದೃಷ್ಟ(luck) ನಿಮ್ಮ ಕೈ ಹಿಡಿಯಬಹುದು. ಗೌರವ, ಮರ್ಯಾದೆ, ಖ್ಯಾತಿ ಹೆಚ್ಚಬಹುದು. ಹಿಡಿದ ಕೆಲಸಗಳೆಲ್ಲ ಪೂರೈಸುವುದು. ಅನಿರೀಕ್ಷಿತವಾಗಿ ಉತ್ತಮ ಅವಕಾಶ(oppurtunity) ಹುಡುಕಿಕೊಂಡು ಬರಬಹುದು. ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ಸಂಸಾರದಲ್ಲಿ ಕಸಿವಿಸಿ.

Tap to resize

Latest Videos

undefined

ಮಿಥುನ(Gemini)
ನೂರೆಂಟು ಯೋಚನೆಗಳು ನಿಮ್ಮನ್ನು ಹೈರಾಣು ಮಾಡಬಹುದು. ಮಕ್ಕಳ ಜೊತೆಗೆ ಕಲಹವಾಗಬಹುದು. ಸಾಧ್ಯವಾದಷ್ಟು ಮಕ್ಕಳನ್ನು ಪ್ರೀತಿಯಿಂದ ಸಮಾಧಾನಿಸಲು ನೋಡಿ. ಕೋಪ(anger) ನಿಯಂತ್ರಿಸಿ. ಸಾಲಗಳು ಬೇಗ ತೀರದೇ ಚಿಂತೆಯಾಗಬಹುದು. ಸಾಲ ಮಾಡಲು, ಕೊಡಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ಶುಭ ಫಲಗಳಿವೆ. ಮಿತ್ರರಿಂದ ಸಹೋದ್ಯೋಗಿಗಳಿಂದ ಸಮಸ್ಯೆಗಳಾಗಬಹುದು.

ಕರ್ಕಾಟಕ(Cancer)
ದುಡ್ಡಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಹಣಕಾಸಿನ ವಿಚಾರದಲ್ಲಿ ಮೋಸ ಆಗುವ ಸಾಧ್ಯತೆಗಳಿವೆ. ಮನಸ್ಸಿಗೆ ಬೇಸರವಾಗಬಹುದು. ಭೂಮಿ ಖರೀದಿಯಲ್ಲಿ ಹುಷಾರಾಗಿರಿ. ಗುರುವಿಗೆ ಪರಿಹಾರ ಮಾಡಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು. ನೆಮ್ಮದಿ ಕಡಿಮೆ ಆಗಬಹುದು. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ವ್ಯಾಪಾರದಲ್ಲಿ ಲಾಭವಿದೆ. ಕೆಲಸದ ಜವಾಬ್ದಾರಿ ಹೆಚ್ಚಾಗಬಹುದು.

ಸಿಂಹ(Leo)
ನಿಮ್ಮಲ್ಲಿ ಮನೋಬಲ ಜಾಸ್ತಿಯಾಗಲಿದೆ. ಕೆಲಸದ ಅಡೆತಡೆಗಳು ನಿವಾರಣೆಯಾಗಲಿದೆ. ಹಣಕಾಸಿನ ಅಡೆತಡೆಗಳು ನಾಶವಾಗಲಿದೆ. ಉದ್ಯೋಗದಲ್ಲಿ ಹೊಸ ಬದಲಾವಣೆಯಾಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಅಭಿವೃದ್ಧಿ ಇದೆ. ಹಣಕಾಸಿನ ವಿಚಾರದಲ್ಲಿ ಸಾಲದ ಒತ್ತಡ ಹೆಚ್ಚಾಗಬಹುದು. ಮನಸ್ಸಿಗೆ ಬೇಸರ ಆಗಬಹುದು. ಕೆಲಸದ ಒತ್ತಡ(stress) ಹೆಚ್ಚಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ಫಲ.

Lord Shani: ಮನೆಯಲ್ಲಿ ಶನಿದೇವರ ಮೂರ್ತಿ ಏಕೆ ಇರೋದಿಲ್ಲ ಗೊತ್ತಾ?

ಕನ್ಯಾ(Virgo)
ಪದೇ ಪದೇ ಕಲಹಗಳು ಮನಃಶಾಂತಿ ಮರೀಚಿಕೆಯಾಗಬಹುದು. ಉದ್ಯೋಗದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚಿಂತೆಗಳು ಹೆಚ್ಚಾಗಬಹುದು. ನೀವು ಎಷ್ಟು ತಾಳ್ಮೆಯಿಂದ ಇರುತ್ತೀರೋ ಅಷ್ಟು ಒಳ್ಳೆಯದು. ಮಾತು ಕಡಿಮೆ ಮಾಡಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಿಮ್ಮ ಮಾತಿನಿಂದಲೇ ನಿಮಗೆ ಸಮಸ್ಯೆ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ವಿಪರೀತ ಖರ್ಚುಗಳು ಬರಬಹುದು.

ತುಲಾ(Libra)
ಮಕ್ಕಳ ವಿಚಾರದಲ್ಲಿ ಬಾಧೆ ಉಂಟಾಗಬಹುದು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಬೆನ್ನುನೋವು ಸಮಸ್ಯೆ ಇರುವವರಿಗೆ ಅದು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಹೊಟ್ಟೆಯಲ್ಲಿ ಸಮಸ್ಯೆ ಆಗಬಹುದು. ಭೂಮಿ ವಿಚಾರದಲ್ಲಿ ಉತ್ತಮ ಯೋಗವಿದೆ. ಸೈಟ್ ಅಥವಾ ಜಮೀನು ಖರೀದಿಯಲ್ಲಿ ಹೂಡಿಕೆ ಮಾಡುವಿರಿ. ಕೆಲಸದಲ್ಲಿ ಉತ್ತಮ ಬದಲಾವಣೆಗಳು ಆಗುತ್ತವೆ. ನಿಮ್ಮ ಬುದ್ಧಿಮತ್ತೆಗೆ ಮೆಚ್ಚುಗೆ ಸಿಗಬಹುದು.

ವೃಶ್ಚಿಕ(Scorpio)
ನಿಮ್ಮಲ್ಲಿ ಕೆಲವೊಂದು ಬದಲಾವಣೆಗಳಾಗಬಹುದು. ನಿಮ್ಮಲ್ಲೊಂದು ತಾಳ್ಮೆ ಬರಬಹುದು. ಬಹಳ ಯೋಚನೆ ಮಾಡಿ ಕೆಲಸ ಮಾಡ್ತೀರಿ. ಹೀಗಾಗಿ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ಉದ್ಯೋಗದಲ್ಲಿ ಅಭಿವೃದ್ಧಿ, ಗೌರವ, ಮರ್ಯಾದೆ ಹೆಚ್ಚಲಿದೆ. ಉದ್ಯೋಗದಲ್ಲಿ ಒಂದು ಹಂತ ಮೇಲಕ್ಕೇರುವಿರಿ. ಸ್ವಂತ ಉದ್ಯೋಗ ಮಾಡುವವರಿಗೆ ಉತ್ತಮ ಲಾಭವಿದೆ. ಕೆಲಸ ಕಾರ್ಯಗಳಿಗೆ ಸಂಗಾತಿಯ ಸಹಾಯ ಸಿಗುತ್ತೆ.

Ukraine Russia Crisis: ಯುದ್ಧದ ಬಗ್ಗೆ ಎರಡು ವರ್ಷ ಮುಂಚೆಯೇ ಹೇಳಿದ್ರಾ ಕೋಡಿಶ್ರೀ?

ಧನು(Saggitarius)
ಸಾಧ್ಯವಾದಷ್ಟು ತಾಳ್ಮೆಯಿಂದಿರಿ. ಬೇರೆಯವರ ನಡವಳಿಕೆ, ಮಾತಿನಿಂದ ನಿಮಗೆ ಬೇಸರವಾಗಬಹುದು. ಕೋಪ ಬರಬಹುದು, ಜಗಳ ಮಾಡುವ ಸಾಧ್ಯತೆ. ಸಮಯ ಅಷ್ಟು ಸೂಕ್ತವಾಗಿಲ್ಲ. ಕೆಲಸ ಕಾರ್ಯಗಳಲ್ಲಿ ಉತ್ತಮ ಫಲವಿದೆ. ವೇಗಗತಿಯಿಂದ ಕೆಲಸಗಳು ಸಾಗುತ್ತವೆ. ಆದರೆ ಎಲ್ಲ ಕೆಲಸ ಒಮ್ಮೆಲೆ ಶುರು ಮಾಡಿ ಕೊನೆ ಮಾಡಲು ಹರಸಾಹಸ ಪಡಬೇಕಾಬಹುದು. ಖರ್ಚು ಕಡಿಮೆ, ಲಾಭ ಹೆಚ್ಚು.

ಮಕರ(Capricorn)
ವಿಪರೀತ ತಲೆನೋವು, ಒತ್ತಡ ಉಂಟಾಗಬಹುದು. ದೊಡ್ಡಮಟ್ಟದ ಹಣವನ್ನು ಹೂಡಿಕೆ ಮಾಡಲು ಮುಂದಾಗುವಿರಿ. ಆದರೆ ಈ ವಿಚಾರದಲ್ಲಿ ಬಹಳ ಜಾಗರೂಕತೆ ಅತ್ಯವಶ್ಯಕ. ಸಂಪಾದನೆಯಲ್ಲಿ ಕೊಂಚ ಹಣವನ್ನು ಕೂಡಿಡುವ ಕೆಲಸ ಮಾಡಿ. ಸುಸ್ತು ಉಂಟಾಗಬಹುದು. ಆಂಜನೇಯನ ಆರಾಧನೆ ಮಾಡಿ. ಸರ್ಕಾರಿ ನೌಕರರಿಗೆ ಒತ್ತಡ ಜಾಸ್ತಿ. ಆದರೆ ನಿಭಾಯಿಸುವ ಜಾಣ್ಮೆ ಇರುತ್ತೆ.

ಕುಂಭ(Aquarius)
ಈ ವಾರ ನಾಲ್ಕು ಗ್ರಹಗಳು ದುಸ್ಥಾನದಲ್ಲಿವೆ. ಶತ್ರು ನಿಮ್ಮ ಮನೆಗೇ ಬಂದ ಹಾಗಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ನಿಮ್ಮ ಮೇಲೆ ಕೆಲವರು ಹೊಟ್ಟೆ ಉರಿ ಪಡುವ ಸಂದರ್ಭ ಎದುರಾಗಬಹುದು. ವೈಯುಕ್ತಿಕ ವಿಚಾರಗಳನ್ನು ಗೌಪ್ಯವಾಗಿಟ್ಟಿರಿ. ಇದ್ದೂ ಇಲ್ಲದ ಹಾಗೆ ನೀವು ಈ ವಾರ ಇರಬೇಕು. ಸಹೋದರರ ವಿಚಾರವಾಗಿ ನಷ್ಟ, ಬೇಸರ ಉಂಟಾಗಬಹುದು. ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು.

ಮೀನ(pisces)
ಉತ್ತಮ ಯೋಗವಿದೆ. ಧನಲಾಭ, ಭಾಗ್ಯ ಲಾಭ ಉಂಟಾಗಬಹುದು. ಬಹಳ ದಿನದಿಂದ ಆಗದ ಕೈಚೆಲ್ಲಿದ್ದ ಕೆಲಸಗಳು ಬಹಳ ಸುಲಭವಾಗಿ ಆಗಬಹುದು. ನಿಮಗೇ ಇದನ್ನು ಕಂಡು ಅಚ್ಚರಿಯಾಗಬಹುದು. ಕೆಲಸದಲಿ ತುಂಬ ದೊಡ್ಡ ಮಟ್ಟದ ಅಭಿವೃದ್ಧಿ ಇರುತ್ತದೆ. ಒಡವೆ, ವಸ್ತ್ರ ಕೊಂಡುಕೊಳ್ಳುವ ಯೋಗವಿದೆ. ಮನೆಕಟ್ಟಿಸುವ ಯೋಚನೆ ಮಾಡುವಿರಿ. ಸಂಗಾತಿಯ ಜೊತೆಗೆ ಕೊಂಚ ಕಿರಿಕಿರಿ ಉಂಟಾಗಬಹುದು. 
 

click me!