ಸೌದಿ ಅರೇಬಿಯಾದ ತೈಲ ಗೋದಾಮಿನ ಮೇಲೆ ಹೋತಿ ದಾಳಿ, ಇನ್ನೊಂದು ಯುದ್ಧದ ಮುನ್ಸೂಚನೆ?

ಸೌದಿ ಅರೇಬಿಯಾದ ತೈಲ ಗೋದಾಮಿನ ಮೇಲೆ ಹೋತಿ ದಾಳಿ, ಇನ್ನೊಂದು ಯುದ್ಧದ ಮುನ್ಸೂಚನೆ?

Published : Mar 27, 2022, 07:08 PM ISTUpdated : Mar 27, 2022, 07:46 PM IST

ಸೌದಿ ಅರೇಬಿಯಾದ ತೈಲ ಗೋದಾಮಿನ ಮೇಲೆ ಯುಮೆನ್ ನ ಹೋತಿ ಬಂಡುಕೋರರ ದಾಳಿ

ಯೆಮೆನ್ ನಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾದ ಸೌದಿ ಅರೇಬಿಯಾ

ರಷ್ಯಾ-ಉಕ್ರೇನ್ ಬಳಿಕ ಮತ್ತೊಂದು ಯುದ್ಧ ನಡೆಯುವ ಮುನ್ಸೂಚನೆ

ಬೆಂಗಳೂರು (ಮಾ. 27): ಯೆಮೆನ್‌ನ ಹೋತಿ  (Yemens Houthi) ಬಂಡುಕೋರರು ಸೌದಿ ಅರೇಬಿಯಾದ (Saudi Arabia) ಮೇಲೆ ಸರಣಿ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದೆ. ಸೌದಿ ಅರೇಬಿಯಾದ ಪ್ರಮುಖ ಮಾಧ್ಯಮ ಸಂಸ್ಥೆಯ ವರದಿ ಪ್ರಕಾರ, ಜೆಡ್ಡಾದಲ್ಲಿನ (Jeddah) ತೈಲ ಡಿಪೋ ಮತ್ತು ರಿಯಾದ್‌ನಲ್ಲಿರುವ ಇತರ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ಮಾಡಲಾಗಿದೆ. ಭಾನುವಾರ ಫಾರ್ಮುಲಾ ಒನ್ ರೇಸ್‌ಗೆ ಆತಿಥ್ಯ ವಹಿಸಲು ನಗರವು ಸಿದ್ಧತೆ ನಡೆಸುತ್ತಿರುವಾಗ ಜೆಡ್ಡಾದಲ್ಲಿನ ಸ್ಥಾವರದಿಂದ ಬೃಹತ್ ಕಪ್ಪು ಹೊಗೆಯೊಂದು ಏರುತ್ತಿರುವುದು ಕಂಡುಬಂದಿದೆ.

ಭಾರತವು ತನ್ನ ಹೆಚ್ಚಿನ ತೈಲವನ್ನು ಸೌದಿ ಅರೇಬಿಯಾದಿಂದ ಖರೀದಿ ಮಾಡುತ್ತದೆ. ಆದರೆ, ಹೋತಿ ಬಂಡುಕೋರರು ವಿಶ್ವದ ಅತೀದೊಡ್ಡ ತೈಲ ಸಂಸ್ಕರಣಾ ಕಂಪನಿ, ಸೌದಿ ಅರೇಬಿಯಾ ಸರ್ಕಾರದ ಒಡೆತನದಲ್ಲಿರುವ ಅರಾಮ್ಕೋ (Aramco) ಮೇಲೆ ಡ್ರೋನ್ ಹಾಗೂ ರಾಕೆಟ್ ದಾಳಿ ನಡೆಸಿದೆ. ಇದರಿಂದಾಗಿ ಭಾರತದಲ್ಲಿ ಮತ್ತೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಏರಿಕೆ ಸಂಭವ ಕಂಡುಬಂದಿದೆ.

No Confidence Motion ಪಾಕ್ ಪ್ರಧಾನಿಗೆ ಕೈಕೊಟ್ಟ ಬಲೂಚ್ ಪಾರ್ಟಿ, ಮೈತ್ರಿ ಮುರಿದು ಇಮ್ರಾನ್ ವಿರುದ್ಧ ಹೋರಾಟ!

ಶುಕ್ರವಾರ ಸಂಜೆಯ ವೇಳೆಗೆ ಹೋತಿ  ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ಅವರು ಕ್ಷಿಪಣಿಗಳ ಮೂಲಕ ಅರಾಮ್ಕೊದ ಸೌಲಭ್ಯಗಳ ಮೇಲೆ ಮತ್ತು ರಾಸ್ ತನುರಾ ಮತ್ತು ರಾಬಿಗ್ ಸಂಸ್ಕರಣಾಗಾರಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಯೆಮೆನ್‌ನ ಹೋತಿ -ನಿಯಂತ್ರಿತ ರಾಜಧಾನಿ ಸನಾ ಮತ್ತು ಕೆಂಪು ಸಮುದ್ರದ ಬಂದರು ನಗರ ಹೊಡೆಡಾದ ಮೇಲೆ ವಾಯು ದಾಳಿ ಸೇರಿದಂತೆ - ತನ್ನ ತೈಲ ಸೌಲಭ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಮತ್ತು "ಜಾಗತಿಕ ಶಕ್ತಿಯನ್ನು ರಕ್ಷಿಸಲು" ಯೆಮೆನ್‌ನಲ್ಲಿನ ಒಕ್ಕೂಟದ ಹೋರಾಟವು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಶನಿವಾರ ಸೌದಿ ರಾಜ್ಯ ಮಾಧ್ಯಮ ಹೇಳಿದೆ.

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more