2022ರ ವರ್ಷ ಪ್ರಕೃತಿಯ ವಿಕೋಪದ ವರ್ಷ. ಈ ವರ್ಷದಲ್ಲಿ ಪಂಚಭೂತಗಳು ನಮ್ಮನ್ನು ಬೆನ್ನು ಬಿಡದೆ ಕಾಡಿವೆ. ಅವುಗಳ ಮಾಹಿತಿ ಇಲ್ಲಿದೆ.
ಇನ್ನೇನು ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಆದರೆ 2022ರಲ್ಲಿ ಅನೇಕ ಪ್ರಕೃತಿ ವಿಕೋಪಗಳು ನಡೆದಿವೆ. ಚಂಡಮಾರುತದ ಅಬ್ಬರಕ್ಕೆ ಮಾರಣಹೋಮ ನಡೆದಿದೆ. ಮೆಗಿ ಅಬ್ಬರಕ್ಕೆ ಅನೇಕ ರಾಷ್ಟ್ರಗಳು ಗಡಗಡ ನಡುಗಿದೆ. 20 ವರ್ಷದ ನಂತರ ಅಫ್ಘಾನಿಸ್ತಾನದಲ್ಲಿ ಭೂಕಂಪ ಆಗಿ, 1000ಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆ. ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹಕ್ಕೆ ಜನ ಜೀವನವೇ ಸಂಪೂರ್ಣ ತತ್ತರಿಸಿದೆ. ಗಾಳಿ, ಮಳೆ ಹಾಗೂ ಚಂಡಮಾರುತಕ್ಕೆ ಭಾರತ ಬೆಚ್ಚಿಬಿದ್ದಿದೆ. ಕರ್ನಾಟಕದತ್ತ ಕೆಂಗಣ್ಣ ಬೀರಿದ್ದ ವರುಣಾಸುರ, ಕಾಳ್ಗಿಚ್ಚಿಗೆ ಹೊತ್ತಿ ಉರಿದು ಭಸ್ಮವಾದ ಗ್ರಾಮ. ಸಾವಿರಾರು ಹೆಕ್ಟೆರ್ ಕಾಡು ಕಾಳ್ಗಿಚ್ಚಿಗೆ ಧಗಧಗ ಎಂದಿದೆ. ಹೀಗೆ ಅನೇಕ ಪ್ರಕೃತಿ ವಿಕೋಪಗಳು ನಡೆದಿವೆ.