Oct 13, 2023, 2:31 PM IST
ಇಸ್ರೇಲ್‌ನ ಅಭೇದ್ಯ ರಕ್ಷಣಾಕೋಟೆಯನ್ನು ಭೇದಿಸಿ ಒಳ ನುಗ್ಗಿದ್ದ ಹಮಾಸ್ ಉಗ್ರರು, ಯಹೂದಿಗಳ ನೆಲೆದಲ್ಲಿ ರಕ್ತದೋಕುಳಿಯನ್ನೇ ಹರಿಸಿದ್ದಾರೆ. ಇಸ್ರೇಲ್ Vs ಹಮಾಸ್ ಯುದ್ಧದಲ್ಲಿ ಇಲ್ಲಿವರೆಗೆ ಇಸ್ರೇಲ್‌ನಲ್ಲಿ(Isreal) 1500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ರೆ, ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯಲ್ಲಿ(Gaza) ಪ್ರಾಣ ಕಳೆದುಕೊಂಡವರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಇಂಥಾ ಒಂದು ನರಮೇಧಕ್ಕೆ ಕಾರಣ ಹಮಾಸ್‌ನ ಅಟ್ಟಹಾಸ. ಇದನ್ನು ಮಟ್ಟ ಹಾಕಲು ಇಸ್ರೇಲ್ ಪಣ ತೊಟ್ಟಿದೆ. ಹಮಾಸ್ ಬಂಡುಕೋರರನ್ನು(Terrorist) ಬುಡ ಸಮೇತ ಕಿತ್ತು ಹಾಕುವ ಶಪಥ ಮಾಡಿರೋ ಇಸ್ರೇಲ್, 4 ಡೆಡ್ಲಿ ಅಸ್ತ್ರಗಳನ್ನು ತನ್ನ ಶತ್ರುಗಳತ್ತ ಪ್ರಯೋಗಿಸಿದೆ. ಹಮಾಸ್(Hamas) ಸರ್ವನಾಶದ ಪ್ರತಿಜ್ಞೆ ಮಾಡಿರೋ ಇಸ್ರೇಲ್ ಸೇನೆ, ಗಾಜಾಪಟ್ಟಿಯಲ್ಲಿ ಬೀಡು ಬಿಟ್ಟಿದ್ದ ಹಮಾಸ್ ಬಂಡುಕೋರರ ಮೇಲೆ ವೈಟ್ ಪ್ರಾಸ್ಪರಸ್ ಬಾಂಬ್ ದಾಳಿ ನಡೆಸಿದೆ. ಪರಿಣಾಮ ಗಾಜಾ ಪ್ರದೇಶದಲ್ಲಿದ್ದ ಹಮಾಸ್ ಬಂಡುಕೋರರು, ಅವರು ಅಡಗಿಕೊಂಡಿದ್ದ ಬಂಕರ್‌ಗಳು, ಹಮಾಸ್‌ಗಳಿಗೆ ಸೇರಿದ್ದ ಕಟ್ಟಡಗಳೆಲ್ಲಾ ಸುಟ್ಟು ಕರಕಲಾಗಿ ಬಿಟ್ಟಿವೆ. ಗಾಜಾ ಮೇಲೆ ಇಸ್ರೇಲ್ ಸೇನೆ ವೈಟ್ ಪಾಸ್ಪರಸ್ ಬಾಂಬ್ ಹಾಕಿರುವ ದೃಶ್ಯಗಳನ್ನು ಪ್ಯಾಲೆಸ್ತೀನ್ ಸಚಿವಾಲಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ಇದನ್ನೂ ವೀಕ್ಷಿಸಿ: Israel-Palestine war: ಭಾರತೀಯರನ್ನು ಯುದ್ಧಭೂಮಿಯಿಂದ ಕರೆತರುವುದು ಸವಾಲಿನ ಕೆಲಸನಾ?