
ಬೆಂಗಳೂರು (ಜೂ.10): ಅಮೆರಿಕಾದ ಅದೃಷ್ಟ ಬದಲಾಯಿಸುತ್ತೇನೆ. ಗತವೈಭವ ಮರಳಿ ತರುತ್ತೇನೆ. ಹಿಂಗ್ ಹೇಳ್ಕೊಂಡೇ ಅಮೆರಿಕಾದ ಶ್ವೇತಭವನಕ್ಕೆ, ಎರಡನೇ ಸಲ ಗ್ರಾಂಡ್ ಎಂಟ್ರಿ ಕೊಟ್ಟಿದ್ದರು ಡೊನಾಲ್ಡ್ ಟ್ರಂಪ್. ಆದರೆ, ಅವರು ಆಡಳಿತ ಶುರುಮಾಡಿ ಇನ್ನೂ ಅರ್ಧ ವರ್ಷ ಕೂಡ ಆಗಿಲ್ಲ. ಅಷ್ಟರಲ್ಲೇ ಬೆಟ್ಟದಂಥಾ ವಿರೋಧ ವ್ಯಕ್ತವಾಗುತ್ತಿದೆ.
ಅಮೆರಿಕದಲ್ಲಿ ಜನ ರಸ್ತೆಗೆ ಇಳಿದು ಉಗ್ರ ಹೋರಾಟ ಆರಂಭಿಸಿದ್ದಾರೆ. ಅಮೆರಿಕಾದಲ್ಲೀಗ ಯುದ್ಧಕಾಂಡ ಅಲ್ಲ, ಅಗ್ನಿಕಾಂಡ ಶುರುವಾಗಿದೆ. ಅಮೆರಿಕದಲ್ಲಿ ಅಕ್ರಮ ವಲಸಿಗರ ಹೋರಾಟ ಅಂತರ್ಯುದ್ಧವಾಗಿ ಮಾರ್ಪಟ್ಟಿದೆ.
ಕ್ಯಾಲಿಫೋರ್ನಿಯಾದಲ್ಲಿ ಪ್ರತಿಭಟನೆಯ ಕಾಳ್ಗಿಚ್ಚು ಹಬ್ಬಿದ್ದು, ಹೋರಾಟಗಾರರ ಮಟ್ಟ ಹಾಕಲು 2000 ಸಿಬ್ಬಂದಿಗಳನ್ನು ಟ್ರಂಪ್ ನಿಯೋಜನೆ ಮಾಡಿದ್ದು, ಮಾತ್ರವಲ್ಲದೆ ಮರೀನ್ ಕಮಾಂಡೋಗಳನ್ನೂ ಕಳಿಸಿಕೊಟ್ಟಿದ್ದಾರೆ. ಯುದ್ಧ ನಿಲ್ಲಿಸ್ತೀನಿ ಅಂದವರ ದೇಶದಲ್ಲೇ ಅಂತರ್ಯುದ್ಧ ಶುರುವಾಗಿದ್ದು, ಎಲ್ಲಿ ಹೋಗೆ ಮುಟ್ಟಲಿದೆ ಅನ್ನೋ ಅಂದಾಜು ಯಾರಿಗೂ ಇಲ್ಲ.