ಟ್ರಂಪ್‌ ಅಧಿಕಾರಾವಧಿ ಯುಗಾಂತ್ಯ, ನೂತನ ಅಧ್ಯಕ್ಷರಾಗಿ ಬೈಡೆನ್ ಪ್ರಮಾಣ ವಚನ

Jan 20, 2021, 4:03 PM IST

ವಾಷಿಂಗ್‌ಟನ್ (ಜ. 20): ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು. ಟ್ರಂಪ್ ಮೊಂಡಾಟ ವಿಶ್ವದ ಎದುರು ಜಗಜ್ಜಾಹಿರಾಗಿತ್ತು. ಇದೀಗ  ಚುನಾವಣೆಯಲ್ಲಿ ರೋಚಕ ಗೆಲುವು ಕಂಡ ಡೆಮಾಕ್ರೆಟ್‌ ಪಕ್ಷದ ಜೋ ಬೈಡೆನ್‌  46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಮೆರಿಕಾದಲ್ಲಿ ಭರವಸೆಯ ಬೆಳಕು, ಅಧ್ಯಕ್ಷರಾಗಿ ಬೈಡೆನ್, ಉಪಾಧ್ಯಕ್ಷರಾಗಿ ಕಮಲಾ ಹ್ಯಾರೀಸ್ ಪ್ರಮಾಣ ವಚನ

ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಕೂಡಾ ಶಪಥ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಅಮೆರಿಕ ಕಂಡ ಅತ್ಯಂತ ವಯೋವೃದ್ಧ ಅಧ್ಯಕ್ಷ ಎಂಬ ದಾಖಲೆಗೆ ಬೈಡೆನ್‌ ಮತ್ತು ಉಪಾಧ್ಯಕ್ಷ ಹುದ್ದೆ ಏರಿದ ಮೊದಲ ಮಹಿಳೆ ಎಂಬ ಹಿರಿಮೆಗೆ ಕಮಲಾ ಹ್ಯಾರಿಸ್‌ ಪಾತ್ರರಾಗಲಿದ್ದಾರೆ. ಈ ಮೂಲಕ ಹೊಸ ಇತಿಹಾಸ ರಚನೆಗೆ ಕ್ಷಣಗಣನೆ ಆರಂಭವಾಗಿದೆ.

ಹೊಸ ಅಧ್ಯಕ್ಷರ ಆಗಮನದೊಂದಿಗೆ ಅಮೆರಿಕ ಕಂಡ ಅತ್ಯಂತ ವಿವಾದಿತ ಅಧ್ಯಕ್ಷ, ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬೆಲ್ಲಾ ಕುಖ್ಯಾತಿಗೆ ಗುರಿಯಾದ ಟ್ರಂಪ್‌ ಅಧಿಕಾರವಧಿಯ ಯುಗಾಂತ್ಯವಾಗಲಿದೆ.