ಅಫ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರ ಓದಿಗೆ ಕೊಳ್ಳಿ: ಇರಾನಿನಲ್ಲಿ ಹಿಜಾಬ್ ವಾರ್

Dec 26, 2022, 1:23 PM IST

ತಾಲಿಬಾನಿಗಳು ಎಡಗಾಲಿಟ್ಟು ಬಂದು ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಕೂತಾಗಿನ ದಿನವನ್ನ ಕ್ಷಣವನ್ನ ಮರೆಯೋದಕ್ಕೆ ಆಗೋದಿಲ್ಲಾ. ಆ ದೇಶದ ಜನರೆಲ್ಲಾ ದಿಕ್ಕೆಟ್ಟ ಪ್ರಾಣಿಗಳಂತೆ ಓಡೋಕೆ ಶುರು ಮಾಡಿದ್ರು.. ಅವರಿಗೂ ಗೊತ್ತಿತ್ತು, ತಾಲಿಬಾನಿಗಳು ಬಂದ್ರೆ ನಮ್ಮನ್ನ ಪ್ರಾಣಿಗಳ ಥರವೇ ನೋಡ್ತಾರೆ ಅನ್ನೋದು. ಅದಕ್ಕಾಗಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಓಡಿದ್ರು, ಸಿಕ್ಕ ಸಿಕ್ಕ ವಿಮಾನ ಹತ್ತಿದ್ರು. ವಿಮಾನದ ಮೇಲೆ ಕೂಡ ಕೂತು ಸಾಗಿದ್ರು, ದಾರಿ ಮಧ್ಯದಲ್ಲೇ ಸತ್ತು ಹೆಣವಾದ್ರು. ಈಗ ತಾಲಿಬಾನಿಗಳ ಅರೆಹುಚ್ಚ ಕಾನೂನಿನ ವಿರುದ್ಧ ಅಲ್ಲಿಯ ಹೆಣ್ಣು ಮಕ್ಕಳು ದಂಗೆ ಎದ್ದಿದ್ದಾರೆ. ಹೆಣ್ಣು ಅಂದ್ರೆ ಕಿಮ್ಮತ್ತನ್ನೇ ಕೊಡದ ತಿಕ್ಕಲು ತಾಲಿಬಾನ್ ವಿರುದ್ಧ ಏನಿದು ಸ್ತ್ರೀ ಸಂಘರ್ಷ ಅನ್ನೋದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಅಪಘಾತದ ಆಘಾತವನ್ನು ಯಾವ ಪರಿಹಾರವೂ ಅಳಿಸಲಾಗದು: ಸುಪ್ರೀಂ