ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!

ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!

Published : Sep 03, 2025, 10:27 AM IST

ಭಾರತ ಎಲ್ಲಿದೆ, ಪಾಕಿಸ್ತಾನದ ಗತಿ ಏನಾಗಿದೆ ಅಂತ ಹೇಳೋಕೆ.. ಇವತ್ತು ಡ್ರ್ಯಾಗನ್ ದೇಶದ ನೆಲದಲ್ಲಿ, ಭಾರತದ ಪ್ರಧಾನ ಮಂತ್ರಿಗಳಿಗೆ, ಹಿಂದೆಂದೂ ಇಲ್ಲದ ಗೌರವ, ಮನ್ನಣೆ ಸಿಕ್ತಾ ಇದೆ.

ಈ ಒಂದು ದೃಶ್ಯ ಸಾಕು ವೀಕ್ಷಕರೇ, ಭಾರತ ಎಲ್ಲಿದೆ,  ಪಾಕಿಸ್ತಾನದ ಗತಿ ಏನಾಗಿದೆ ಅಂತ ಹೇಳೋಕೆ.. ಇವತ್ತು ಡ್ರ್ಯಾಗನ್ ದೇಶದ ನೆಲದಲ್ಲಿ, ಭಾರತದ ಪ್ರಧಾನ ಮಂತ್ರಿಗಳಿಗೆ, ಹಿಂದೆಂದೂ ಇಲ್ಲದ ಗೌರವ, ಮನ್ನಣೆ ಸಿಕ್ತಾ ಇದೆ. ಚೀನಾ ಮಾತ್ರವಲ್ಲದೆ, ರಷ್ಯಾ ಮಾತ್ರವೇ ಅಲ್ಲದೆ, ಉಳಿದ ದೇಶಗಳೂ ಕೂಡ, ಭಾರತದ ಪ್ರತಿ ಶಬ್ದಕ್ಕೂ ಕಿವಿಯಾಗೋಕೆ ಕಾಯ್ತಿದ್ದಾವೆ. ಅದೇ ಥರ, ಅಮೆರಿಕಾ ಕೂಡ, ಭಾರತ ಅದೆಂಥಾ ವ್ಯೂಹ ಹೆಣೆದಿದೆಯೋ ಅನ್ನೋ ಭೀತಿಯಲ್ಲಿ ಮುಳುಗಿದೆ.. ಇದೆಲ್ಲಾ ಶುರುವಾಗಿದ್ದು ಹೇಗೆ? ಈಗೆಲ್ಲಿಗೆ ಬಂದು ನಿಂತಿದೆ? ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. ನಾವೀಗ ನೋಡ್ತಾ ಇರೋದು, ಅಪ್ಪಟ ಚದುರಂಗದ ಆಟ. ಯಾರು ಯಾವ ಕಾಯಿ ಮುನ್ನಡೆಸ್ತಾರೆ ಅನ್ನೋದು, ಒಂದಿಡೀ ದೇಶದ ಭವಿಷ್ಯವನ್ನೇ ನಿರ್ಧಾರ ಮಾಡಲಿದೆ.  ಈ ಆಟ ಮುಗಿಯೋದ್ರಲ್ಲಿ, ಜಾಗತಿಕ ಮಟ್ಟದಲ್ಲೊಂದು ಹೊಸ ಅಧ್ಯಾಯವೇ ಆರಂಭವಾಗಲಿದೆ.

ಅದು ಹೇಗೆ, ಯಾಕೆ ? ಈ ಆಟದಲ್ಲಿ ಭಾರತದ ಮಹತ್ವವೇನು? ಪ್ರಭಾವ ಏನು? ಅಮೆರಿಕಾ ಯಾವುದನ್ನ ಕನಸಲ್ಲೂ ಊಹಿಸಿರ್ಲಿಲ್ವೋ, ಅದು ಈಗ ವಾಸ್ತವ ಅನ್ನೋ ಹಾಗಾಗಿದೆ.. ಭಾರತ ಚೀನಾ ಒಂದಾಗಿವೆ. ಅದಕ್ಕೆ ರಷ್ಯಾದ ಸಪೋರ್ಟು ಸಿಕ್ಕಿದೆ ಈ ಮೂರೂ ದೇಶಗಳು ಒಂದಾದ್ರೆ, ಅಮೆರಿಕಾಗೆ ಯಾಕೆ ಕಂಟಕ ಗೊತ್ತಾ? ಟ್ರಂಪ ಸಂಕಟ ಪಡ್ತಿರೋದ್ಯಾಕೆ ಗೊತ್ತಾ? ಇದರ ಬಗ್ಗೆ ಯೋಚಿಸಿದಷ್ಟೂ ಅಮೆರಿಕಾ ಟೆನ್ಷನ್ ಹೆಚ್ಚಾಗ್ತಾ ಇದೆ. ಇದರಿಂದ ಹೊರಗ್ ಬರಕ್ಕೆ ಅಮೆರಿಕಾ ಪ್ರಯತ್ನ ಪಟ್ರೂ ಪ್ರಯೋಜನವಾಗ್ತಾ ಇಲ್ಲ. ಆ ಪ್ರಯತ್ನ ಏನು? ಅದರ ಪರಿಣಾಮ ಏನು? ಭಾರತ, ಚೀನಾ ಹಾಗೂ ರಷ್ಯಾ ಒಂದಾಗ್ತಾ ಇದಾವೆ. ಈ ಸುದ್ದಿ ಕೇಳಿಯೇ ವೈಟ್ ಹೌಸಿನ ದೊಡ್ಡ ತಲೆಗಳಿಗೆ ಶಿರೋಬಾಧೇ ಶುರುವಾಗಿದೆ. ಅಂಥದ್ರಲ್ಲಿ, ಪಾಕಿಸ್ತಾನದ ಗತಿ ಏನು? ಅಲ್ಲಾಗ್ತಾ ಇರೋ ಕತೆ ಏನು? ನೀವೇ ನೋಡಿ.

18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more