ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ‘ಆಪರೇಷನ್ ಗಂಗಾ’ ಏರ್‌ಲಿಫ್ಟ್‌ನಲ್ಲಿ ಈವರೆಗೆ ರಾಜ್ಯದ 44 ವಿದ್ಯಾರ್ಥಿಗಳು ಸುರಕ್ಷಿತವಾಗಿ ಆಗಮಿಸಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ‘ಆಪರೇಷನ್ ಗಂಗಾ’ ಏರ್‌ಲಿಫ್ಟ್‌ನಲ್ಲಿ ಈವರೆಗೆ ರಾಜ್ಯದ 44 ವಿದ್ಯಾರ್ಥಿಗಳು ಸುರಕ್ಷಿತವಾಗಿ ಆಗಮಿಸಿದ್ದಾರೆ.
ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಹೇಳಿ ಕೃತಜ್ಞತೆ ಸಲ್ಲಿಸಿದರು.
‘ಉಕ್ರೇನ್‌ನಲ್ಲಿ ಉಳಿದಿರುವ ನಿಮ್ಮ ಸಹಪಾಠಿ, ಸ್ನೇಹಿತರನ್ನು ಶೀಘ್ರ ಕರೆಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಗಾಬರಿಯಾಗದಂತೆ ಹಾಗೂ ಸುರಕ್ಷಿತ ಸ್ಥಳದಲ್ಲಿರುವಂತೆ ತಿಳಿಸಿ ಧೈರ್ಯ ತುಂಬಬೇಕು. ಸಾಧ್ಯವಾದಷ್ಟುಅವರೊಟ್ಟಿಗೆ ಸಂಪರ್ಕದಲ್ಲಿರಿ’ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ಧೈರ್ಯ ತುಂಬಿದರು. 451 ಕನ್ನಡಿಗರು ಸೋಮವಾರದ ಅಂತ್ಯಕ್ಕೆ ನೋಂದಣಿ ಮಾಡಿಸಿದ್ದು, ಈ ಪೈಕಿ 44 ಮಂದಿ ಮಾತ್ರ ತವರು ಸೇರಿದಂತಾಗಿದೆ. ಉಳಿದ 407 ಮಂದಿ ಉಕ್ರೇನ್‌ನಲ್ಲಿ ಉಳಿದಿದ್ದಾರೆ.