*ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರ ಜಪೋರಿಝಿಯಾ ಮೇಲೆ ರಷ್ಯಾ ದಾಳಿ!
*ಸ್ಫೋಟಗೊಂಡರೆ ಚೆರ್ನೋಬಿಲ್‌ಗಿಂತ 10 ಪಟ್ಟು ಅಪಾಯಕಾರಿ: ಉಕ್ರೇನ್ ಕಳವಳ
ಕೀವ (ಮಾ. 04): ಉಕ್ರೇನ್‌ನ ಮಹಾನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧ ಮುಂದುವರೆದಿದ್ದು 9ನೇ ದಿನ ಉಕ್ರೇನ್ ಮೇಲೆ ರಷ್ಯಾ ಮತ್ತಷ್ಟು ಪ್ರಬಲ ದಾಳಿ ಮಾಡಿದೆ. ಈ ಮಧ್ಯೆ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾ ಎನ್‌ಪಿಪಿ (Zaporizhzhia NPP) ಮೇಲೆ ರಷ್ಯಾದ ಸೈನ್ಯ ದಾಳಿ ಮಾಡಿದೆ. ಜಪೋರಿಝಿಯಾ ಪರಮಾನೂ ಸ್ಥಾಚರ ಸ್ಫೋಟಗೊಂಡರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ (Dmytro Orlov) ಹೇಳಿದ್ದಾರೆ.
ಇದನ್ನೂ ಓದಿ: 9ನೇ ದಿನಕ್ಕೆ ಕಾಲಿಟ್ಟ ಮಹಾಯುದ್ಧ: ಅಂದುಕೊಂಡಿದ್ದನ್ನ ಸಾಧಿಸದೇ ಬಿಡೋದಿಲ್ಲ ಎಂದ ಪುಟಿನ್..!
1986ರಲ್ಲಿ ಚರ್ನೋಬಿಲ್ ಪರಮಾಣು ಸ್ಥಾವರ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸತ್ತಿದ್ದು ಕೆಲವೇ ನೂರಾರು ಜನರಾದರೂ, ಅದರ ಭೀಕರ ಪರಿಣಾಮಗಳಿಗೆ ತುತ್ತಾಗಿದ್ದು 5 ಲಕ್ಷಕ್ಕೂ ಹೆಚ್ಚು ಜನರು. ಈಗಲೂ ಅದರಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಜಪೋರಿಝಿಯಾ ಎನ್‌ಪಿಪಿ ಸ್ಫೋಟಗೊಂಡರೆ ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ. ಹೀಗಾಗಿ ಮತ್ತೇನಾದರೂ ಅಂಥದ್ದೇ ದುರಂತ ಸಂಭವಿಸಿದರೆ ವಿಶ್ವ ಮತ್ತೊಂದು ಘೋರ ದುರಂತಕ್ಕೆ ಸಾಕ್ಷಿಯಾಗುವ ಭೀತಿ ಎದುರಾಗಿದೆ