ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದ ಮೊಸಾಬ್: ಕ್ರೈಸ್ತ್ರ ಧರ್ಮಕ್ಕೆ ಮತಾಂತರನಾಗಿದ್ದೇಕೆ..?

Oct 15, 2023, 9:18 AM IST

ಇಸ್ರೇಲ್‌ ಹಮಾಸ್‌ ಸಂಸ್ಥಾಪಕನ ಮಗನಿಗೇ ಬ್ರೇನ್ ವಾಶ್ ಮಾಡಿ ಆತ ಅದರ ವಿರೋಧಿ ಆಗುವಂತೆ ಮಾಡಿತ್ತು. ಅಪ್ಪ ಪ್ಲ್ಯಾನ್‌ ಮಾಡಿದ್ರೆ, ಆತ ಅದನ್ನು ಫ್ಲಾಪ್‌ ಮಾಡುತ್ತಿದ್ದ. ಈತನ ಹೆಸರೇ ಮೊಸಾಬ್ ಹುಸನ್ ಯೂಸೆಫ್(Mosab Hussain Yusuf). ಈತ ಮೇ.5, 1978 ರಂದು ಜನಿಸಿದ. ಮುಸ್ಲಿಂ(Muslim) ಕುಟುಂಬದಲ್ಲಿ ಹುಟ್ಟಿದ್ದ ಮೊಸಾಬ್, ಕ್ರೈಸ್ತ್ರ(Christianity) ಧರ್ಮಕ್ಕೆ ಮತಾಂತರನಾಗಿದ್ದ. ಈತ ಯಹೂದಿಗಳನ್ನು ಕೊಲ್ಲುವ ಆಸೆ ಹೊಂದಿದ್ದ. ಯಾವಾಗ ಮೊಸಾಬ್‌ ಇಸ್ರೇಲ್‌ ಕೈಗೆ ಸಿಲುಕಿಕೊಂಡನೋ, ಆಗ ಆತನಿಗೆ ಬುದ್ಧಿ ಹೇಳಿದೆ. ಬಳಿಕ ಆತ ಇಸ್ರೇಲ್‌ ಬಿಟ್ಟು ಅಮೆರಿಕದಲ್ಲಿ ವಾಸ ನಂತರ ಮೊಸಾಬ್‌ ಹಸನ್‌ ಯೂಸಫ್‌ ಅಮೆರಿಕಾಗೂ(America) ತಲೆನೋವಾಗಿ ಹೋಗಿದ್ದ. ಹಮಾಸ್‌ ಉಗ್ರ ಸಂಘಟನೆಯ ಅನ್ಯಾಯದ ವಿರುದ್ಧ ಮೊಸಾಬ್‌ ಧ್ವನಿ ಎತ್ತುತ್ತಿದ್ದ. ಅಲ್ಲದೇ ಅವರ ಪ್ಲ್ಯಾನ್‌ಗಳ ಬಗ್ಗೆ ಇಸ್ರೇಲ್‌ಗೆ ಹೇಳುತ್ತಿದ್ದ. ಆದ್ರೆ ಅಮೆರಿಕ ಮಾತ್ರ ಆತನನ್ನು ಉಗ್ರ ಎಂದೇ ತಿಳಿದುಕೊಂಡಿತ್ತು.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಮೇಲಿ ದಾಳಿ ಮಾಡಿ ಕೆಟ್ಟ ಹಮಾಸ್, ಓಡಿ ಹೋಗಲು ಗಡಿ ತೆರೆಯುವಂತೆ ಮನವಿ!