Oct 1, 2023, 8:58 AM IST
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಹೀಗಾಗಿ ರಷ್ಯಾ(Russia) ಹೊಸ ಸೈನಿಕರನ್ನು ಸೃಷ್ಟಿಸುತ್ತಿದೆ. ಅದು ಬೇರೆಯಾರು ಅಲ್ಲ, ಓದುವ ವಯಸ್ಸಿನ ಮಕ್ಕಳ ಕೈಯಲ್ಲಿ ರಷ್ಯಾ ಗನ್(Gun) ಕೊಡುತ್ತಿದೆ. ಶಾಲಾ ಮಕ್ಕಳು ಯೂನಿಫಾರ್ಮ್ ಹಾಕುವ ಬದಲು ಸೇನಾ ಸಮವಸ್ತ್ರ ಹಾಕುತ್ತಿದ್ದಾರೆ. ನರ್ಸರಿ ಮಕ್ಕಳಿಗೂ ಮಿಲಿಟರಿ ಟ್ರೈನಿಂಗ್ ಕೊಡಲಾಗುತ್ತಿದ್ದು, ಶಾಲಾ ಗ್ರೌಂಡ್ನಲ್ಲಿ ಸೇನಾ ಪರೇಡ್(Military parade) ನಡೆಸಲಾಗುತ್ತಿದೆ. ರಷ್ಯಾದ ಶಾಲೆಗಳು(Schools) ಈಗ ಸಮರಾಂಗಣವಾಗಿದ್ದು, ಪುಟೀನ್ ಪುಂಡಾಟಕ್ಕೆ ಮಕ್ಕಳು ಟಾರ್ಗೆಟ್ ಆಗುತ್ತಿದ್ದಾರೆ. ಏಳು ಅಥವಾ ಎಂಟು ವರ್ಷ ವಯಸ್ಸಿನ ಮಕ್ಕಳು ಮೂಲಭೂತ ಮಿಲಿಟರಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಮೆಷಿನ್ ಗನ್ ಅನ್ನು ಜೋಡಿಸಿ ಮತ್ತು ಅಡಚಣೆಯ ಕೋರ್ಸ್ ಅನ್ನು ಪಡೆಯುತ್ತಾರೆ. ಹೆಚ್ಚಿನ ಪೋಷಕರು ಮತ್ತು ಶಿಕ್ಷಕರು ಮಿಲಿಟರಿ ಪಠ್ಯಕ್ರಮವನ್ನು ಬೆಂಬಲಿಸುತ್ತಾರೆ. 79 ರಷ್ಟು ಪೋಷಕರು ಆಡಳಿತದ ಪರವಾಗಿದ್ದಾರೆ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದು ತ್ರಿಶಂಕು ಸ್ಥಿತಿಯಲ್ಲಿ ಸಿಎಂ ಇಬ್ರಾಹಿಂ!