ಈಗಾಗಲೇ ತುಂಬಾ ಕಷ್ಟ ಅನುಭವಿಸಿದ್ದೇವೆ: ಲಂಕಾ ಜನರ ಅಳಲು

Jul 13, 2022, 8:22 PM IST

ಕೊಲಂಬೋ (ಜುಲೈ 13): ಶ್ರೀಲಂಕಾದಲ್ಲೀಗ ಅಕ್ಷರಶಃ ಅರಾಜಕತೆ ತಾಂಡವವಾಡುತ್ತಿದೆ. ಮುಂದೇನು ಎನ್ನುವ ಪ್ರಶ್ನಾರ್ಥಕ ಚಿಹ್ನೆ ಜನರಲ್ಲಿ ಮನೆ ಮಾಡಿದೆ. ರಾಜಕೀಯ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಲಂಕಾ ನೆಲದಿಂದಲೇ ಈಗ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದೆ.

ಗೋಟಬಯ ರಾಜಪಕ್ಸ (Gotabaya Rajapaksa) ಅವರ ಅಧಿಕೃತ ನಿವಾಸವಾದ  ಅಧ್ಯಕ್ಷರ ಅರಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಅಲ್ಲಿನ ವೈಭೋಗಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಭವನವನ್ನು ನೋಡುವ ಸಲುವಾಗಿ ಲಂಕಾದಲ್ಲಿ ಸರತಿ ಸಾಲಿನಲ್ಲಿ ಜನ ನಿಂತಿದ್ದಾರೆ. ಇಂದು ನಾವು ಬೇರೆ ಯಾವುದೇ ಕಾರಣಕ್ಕಾಗಿ ಇದರ ಮುಂದೆ ಕುಳಿತಿಲ್ಲ. ಗೋಟಬಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದಷ್ಟೇ ನಮಗೆ ಬೇಕಾಗಿರುವುದು. ಈಗಾಗಲೇ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ' ಎಂದು ಪ್ರತಿಭಟನಾನಿರತ ( Protestors) ಮಹಿಳೆಯೊಬ್ಬರು ಮಾತನಾಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರ ಕೋಪಕ್ಕೆ ಶ್ರೀಲಂಕಾ ರಾಜಕಾರಣಿಗಳು ಗಢಗಢ, ಎಲೆಕ್ಷನ್‌ಗೂ ನಕಾರ!

ಇದು ಪ್ರತಿಭಟನೆಯ 96ನೇ ದಿನ. ನಮಗೆ ನಮ್ಮ ದೇಶ ಬೇಕು. ದೇಶವನ್ನು ಬಿಟ್ಟು ನಾವು ಎಲ್ಲಿಯೂ ಹೋಗೋದಿಲ್ಲ. ಹೊಸ ಸರ್ಕಾರ ಬರಬೇಕು ಅದು ನಮ್ಮ ಇಚ್ಛೆ. ಇಡೀ ರಾಜಪಕ್ಸ ಕುಟುಂಬ ನಮ್ಮ ಹಣವನ್ನು ನುಂಗಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.