Jan 8, 2024, 8:51 AM IST
2022ರಲ್ಲಿ ನಡೆದ ರಷ್ಯಾ-ಉಕ್ರೇನ್ ವಾರ್(Russia-Ukraine War). ಇಡೀ ವಿಶ್ವವೇ ಈ ಯುದ್ಧದ ರೂಪ ನೋಡಿ ಬೆಚ್ಚಿಬಿದ್ದಿತ್ತು. ಉಕ್ರೇನ್ ನಾಗರಿಕರ ಮೇಲೆ ರಷ್ಯನ್ ಸೈನಿಕರು ಹಸಿದ ರಣಹದ್ದುಗಳಂತೆ ಎಗರಿ ಬಿದ್ದಿದ್ದರು. ಈ ಮಹಾಯುದ್ಧ ಆರಂಭವಾಗಿ 2 ವರ್ಷ ಆಗ್ತಾ ಬಂತು. ಯುದ್ಧ ಮಾತ್ರ ಈ ಕ್ಷಣಕ್ಕೂ ನಿಲ್ಲೋ ಲಕ್ಷಣ ಕಾಣಿಸ್ತಿಲ್ಲ. 2023 ಅಕ್ಟೊಬರ್ 7. ಹಮಾಸ್(Hamas) ಉಗ್ರರು, ಇಸ್ರೇಲ್(Israel) ಮೇಲೆ ಭೀಕರವಾಗಿ ದಾಳಿ ನಡೆಸಿದ್ದ ದಿನ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ನೆಲ, ಜಲ, ವಾಯು ಮಾರ್ಗದ ಮೂಲಕ ದಾಳಿ ನಡೆಸಿದ್ದರು. ಒಂದ್ಕಡೆ ಉಕ್ರೇನ್ ವಾರ್ ನಡೀತಾ ಇದ್ರೆ, ಇನ್ನೊಂದ್ಕಡೆ ಇಸ್ರೇಲ್ ವಾರ್ ದಿನದಿಂದ ದಿನಕ್ಕೆ ಭೀಕರ ರೂಪ ಪಡೀತಾ ಹೋಗ್ತಿದೆ. ಕಿಮ್ ಜಾಂಗ್ ಉನ್(Kim Jong Un) ಅನ್ನೊ ಮಹಾನ್ ಕಿರಾತಕ ತನ್ನ ರಾಷ್ಟ್ರದ ಪ್ರಜೆಗಳಿಗೆ ಮಾತ್ರ ತಲೆ ನೋವಾಗಿರಲಿಲ್ಲ. ಬದಲಾಗಿ ಅನೇಕ ರಾಷ್ಟ್ರಗಳಿಗೆ ಪೀಕಲಾಟ ತಂದಿಟ್ಟ ಮಹಾನ್ ಕ್ರೂರಿ. ಅದಕ್ಕೆನೇ ಯಾವ ರಾಷ್ಟ್ರಗಳು ಕಿಮ್ನನ್ನ ಎದುರಾಕಿಕೊಳ್ಳೊ ಧೈರ್ಯ ಮಾಡೋಲ್ಲ. ಆದರೂ ಈ ಕಿಮ್ ಸುಮ್ಮನಿರಲಾಗದೇ, ಅನೇಕ ರಾಷ್ಟ್ರಗಳ ಜೊತೆ ಕಾಲು ಕೆರೆದುಕೊಂಡು ಹೋಗಿ ಜಗಳ ಮಾಡಿದ್ದಾನೆ. ಅದರಲ್ಲಿ ಅಮೆರಿಕ(America) ಹಾಗೂ ದಕ್ಷಿಣ ಕೋರಿಯಾ(South Korea) ರಾಷ್ಟ್ರಗಳು ಕೂಡ. ಈಗ ಅದೇ ರಾಷ್ಟ್ರಗಳನ್ನ ನಿರ್ನಾಮ ಮಾಡೋ ಶಪಥ ಮಾಡಿದ್ದಾನೆ. ಕಿಮ್ ವಿಶ್ವದ ದೊಡ್ಡಣ್ಣ ಅನಿಸಿಕೊಂಡಿರೋ ಅಮೆರಿಕಾವನ್ನೇ ನಿರ್ನಾಮ ಮಾಡೊದಕ್ಕೆ ಹೊರಟಿದ್ದಾನೆ. ಅದಕ್ಕೆ ಈಗಾಗಲೇ ತನ್ನ ಸೈನಿಕರನ್ನ ಸನ್ನದ್ಧವಾಗಿ ನಿಲ್ಲೊದಕ್ಕೆ ಹೇಳಿದ್ದೂ ಆಗಿದೆ. ದಕ್ಷಿಣ ಕೋರಿಯಾ ಅಥವಾ ಅಮೆರಿಕಾ ಏನಾದ್ರೂ ಉತ್ತರಕೋರಿಯಾ ವಿರುದ್ಧ ಗುಟುರುಗುಟ್ಟಿದ್ದೇ ಆದರೆ ಯುದ್ಧ ಮಾಡೋದಕ್ಕೆ ಹಿಂದೇಟೇ ಹಾಕ್ಬೇಡಿ. ಶತ್ರುಪಾಳಯದವರು ಎದುರು ಸಿಕ್ಕರೆ ಸಾಕು, ಅಲ್ಲೇ ಖೇಲ್ ಖತಂ ಮಾಡೋದಕ್ಕೆ ಕಟ್ಟನಿಟ್ಟಾಗಿ ಕಟ್ಟಾಜ್ಞೆ ಮಾಡಿದ್ದಾನೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಶಿವನ ಪ್ರಾರ್ಥನೆ ಮಾಡಿ, ಇದರಿಂದ ಸಿಗುಲ ಫಲಗಳೇನು ಗೊತ್ತಾ ?