Oct 13, 2023, 2:57 PM IST
ಇಸ್ರೇಲಿನ ಒಬ್ಬ ಮಹಿಳೆಯ ಧೈರ್ಯ ಒಂದು ಊರಿನ ಜೀವ ಉಳಿಸಿತ್ತು. ಮೂವರು ಉಗ್ರರ ಜೀವ ತೆಗೆದವಳು ಕಡೆಗೆ ಪ್ರಾಣ ಬಿಟ್ಟು, ವೀರನಾರಿ ಅನ್ನಿಸಿಕೊಂಡ್ಲು. ಉಗ್ರ ದಾಳಿಗೆ ಸಿಲುಕಿದ ಇಸ್ರೇಲಿಗರ ರಕ್ತ-ಕಣ್ಣೀರಿಗೆ ಧ್ವಂಸವಾಗುತ್ತಿದೆ ಗಾಜಾ(Gaza). ಕಳೆದ ಶನಿವಾರ ಶುರುವಾದ ರಣಭೀಕರ ಯುದ್ಧ, ದಿನದಿನಕ್ಕೂ ಅತಿ ಭಯಾನಕವಾಗಿ ಬದಲಾಗ್ತಾ ಇದೆ. ಪ್ರತಿ ಕ್ಷಣಕ್ಕೂ ಸಾವು ನೋವು ಹೆಚ್ಚಾಗ್ತಲೇ ಇದೆ. ಅದರಲ್ಲೂ ಆರಂಭಿಕ ಹಂತದಲ್ಲಿ ಗೆದ್ದೇಬಿಟ್ಟೆ ಅಂತ ಬೀಗಿದ್ದ ಗಾಜಾ, ಇವತ್ತು ಸತ್ಯನಾಶವಾಗೋಕೆ ಸನ್ನದ್ಧವಾಗ್ಬೇಕಾಗಿದೆ. ಶನಿವಾರದಿಂದ ಇಲ್ಲೀ ತನಕ, 1354 ಮಂದಿ ಪ್ಯಾಲೆಸ್ತೀನಿಗಳು ಪ್ರಾಣ ಕಳ್ಕೊಂಡಿದಾರೆ. 6 ಸಾವಿರಕ್ಕೂ ಅಧಿಕ ಮಂದಿ ಪ್ಯಾಲೆಸ್ತೇನಿಗಳು(Palestine) ಗಂಭೀರ ಗಾಯಕ್ಕೆ ತುತ್ತಾಗಿದಾರೆ. ಗಾಯಾಳುಗಳಿಂದ ತುಂಬಿತುಳುಕ್ತಾ ಇರೋ ಗಾಜಾ ಆಸ್ಪತ್ರೆಗಳಲ್ಲಿ, ರಣಭೀಕರ ಸ್ಥಿತಿ ನಿರ್ಮಾಣವಾಗಿದೆ. ಒಂದ್ ಕಡೆ ಇಸ್ರೇಲ್(Isreal) ಮೇಲೆ ಗಾಜಾ ರಾಕ್ಷಸ ಕ್ರೌರ್ಯ ಮೆರೆಯೋಕೆ ನೋಡ್ತಾ ಇದೆ.. ಆದ್ರೆ ಇಸ್ರೇಲ್ ಈಗಾಗ್ಲೇ ಗಾಜಾನಾ ಅಲುಗಾಡೋಕೂ ಸಾಧ್ಯವಾಗದ ಹಾಗೆ ಕಟ್ಟಿ ಹಾಕ್ತಾ ಇದೆ.. ಅಸಲಿಗೆ ಗಾಜಾ ಅನ್ನೋದು ಇಸ್ರೇಲಿನ ಮೇಲೇ ಡಿಪೆಂಡ್ ಆಗಿರೋ ಪರಾವಲಂಬಿ ದೇಶ.. ಗಾಜಾಗೆ, ನೀರು, ಕರೆಂಟು, ಆಹಾರ ಏನೇ ಬೇಕು ಅಂದ್ರೂ ಅದು ಇಸ್ರೇಲಿನಿಂದಲೇ ಪಾಸ್ ಆಗ್ಬೇಕು.. ಆದ್ರೆ, ಗಾಜಾ ಉಗ್ರರ ಧಿಮಾಕಿಗೆ ಉತ್ತರ ಕೊಡೋಕೆ, ಅದೆಲ್ಲವನ್ನೂ ಇಸ್ರೇಲ್ ಕಟ್ ಮಾಡಿದೆ.. ಸಾಲದು ಅಂತ ಆಕಾಶದಿಂದ ಮಳೆ ಸುರಿದ ಹಾಗೆ ಬಾಂಬುಗಳು ಬಂದು ಬೀಳ್ತಿದ್ದಾವೆ.
ಇದನ್ನೂ ವೀಕ್ಷಿಸಿ: ಉಗ್ರರ ಅಡಗುದಾಣಗಳ ಮೇಲೆ ಬಿತ್ತು "ವೈಟ್ ಫಾಸ್ಪರಸ್ ಬಾಂಬ್": ಭಯಂಕರ ಬಾಂಬ್‌ನ ಚರಿತ್ರೆ ಗೊತ್ತಾ..?