ಯಹೂದಿಗಳ ಭೂಮಿ ಧ್ವಂಸ ಮಾಡಲು ಹೊರಟ ಹಮಾಸ್‌, 'ನಿರ್ನಾಮ ಮಾಡ್ತೀವಿ..' ಎಂದು ಪ್ರತಿಜ್ಞೆ ಮಾಡಿದ ಇಸ್ರೇಲ್‌!

Oct 7, 2023, 11:31 PM IST

ನವದೆಹಲಿ (ಅ.7): ಇಸ್ರೇಲ್-ಪ್ಯಾಲಿಸ್ತೇನ್ ಮಧ್ಯೆ ಮತ್ತೆ ಯುದ್ಧ ಶುರುವಾಗಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ ಬೆನ್ನಲ್ಲಿಯೇ ಇಸ್ರೇಲ್‌ ಪ್ರತೀಕಾರಕ್ಕೆ ಸಜ್ಜಾಗಿದೆ. ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 5 ಸಾವಿರ ರಾಕೆಟ್‌ಗಳಿಂದ ಹಮಾಸ್‌ ದಾಳಿ ಮಾಡಿದೆ. ಆಪರೇಷನ್ ಅಲ್- ಅಕ್ಸಾ ಸ್ಟಾರ್ಮ್ ಹೆಸರಲ್ಲಿ ಹಮಾಸ್ ದಾಳಿ ಪ್ರಾರಂಭ. ಹಮಾಸ್ ಉಗ್ರರ ದಾಳಿಗೆ 100ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ಸಾವು ಕಂಡಿದ್ದಾರೆ.

ಅದಲ್ಲದೆ, ಇಸ್ರೇಲ್ ಗಡಿಗೆ ನುಗ್ಗಿ ಸೈನಿಕರನ್ನ ಹಮಾಸ್‌ ಉಗ್ರರು ಅಪಹರಿಸಿದ್ದಾರೆ. 35ಕ್ಕೂ ಹೆಚ್ಚು ಸೈನಿಕರನ್ನ ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಹಮಾಸ್ ಉಗ್ರರಿಂದ ಮಹಿಳಾ ಸೇನಾಧಿಕಾರಿ ಹತ್ಯೆ ಮಾಡಿದ್ದಲ್ಲದೆ, ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಅದಲ್ಲದೆ, ಶಾರ್ ಹನೇಗೆವ್ ನ ಮೇಯರ್ ಓಫಿರ್ ಲಿಬ್ಸ್ಟೈನ್ ಹತ್ಯೆ ಮಾಡಲಾಗುದೆ. ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಲೆಬನಾನ್ ಉಗ್ರ ಸಂಘಟನೆ ಹಿಜ್ಬುಲ್ಲಾ ಕೂಡ ಸಾಥ್‌ ನೀಡಿದೆ.

'ಉಗ್ರರಿಗೆ ಇದೇ Swords of Iron ಗಿಫ್ಟ್‌' ಫೈಟರ್‌ ಜೆಟ್‌ಗೆ ಬಾಂಬ್‌ ಜೋಡಿಸುವ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್‌!

ಹಮಾಸ್ ಉಗ್ರ ದಾಳಿ ಬೆನ್ನಲ್ಲೇ ಅಖಾಡಕ್ಕೆ ಇಸ್ರೇಲ್‌ ಯುದ್ಧ ಘೋಷಣೆ ಮಾಡಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು, ದಿಢೀರ್‌ ಸಭೆ ನಡೆಸಿ ಯುದ್ಧ ಘೋಷಣೆ ಮಾಡಿದ್ದು, ಗಾಜಾ ಮೇಲೆ ಇಸ್ರೇಲ್‌ ಸೇನೆಯಿಂದ ವಾಯು ದಾಳಿ ಆರಂಭವಾಗಿದೆ. ಹಮಾಸ್‌ ಉಗ್ರ ತಾಣಗಳನ್ನು ಹುಡುಕಿ ಇಸ್ರೇಲ್‌ ದಾಳಿ ಮಾಡುತ್ತಿದೆ.