Aug 19, 2021, 11:46 AM IST
ಕಾಬೂಲ್(ಆ.19) ತಾಲಿಬಾನಿಗಳ ಕ್ರೌರ್ಯಕ್ಕೆ ಅಪ್ಘಾನಿಸ್ತಾನ ಅಕ್ಷರಶಃ ನಲುಗಿದೆ. ಕ್ಷಣ ಕ್ಷಣಕ್ಕೂ ಆತಂಕ ಎದುರಾಗುತ್ತಿದೆ. ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇನ್ನು ಅತ್ತ ತಾಲಿಬಾನ್ ಯಾರಿಗೂ ಏನೂ ಆಗಲ್ಲ ಎಂಬ ಅಭಯ ಕೊಟ್ಟು, ಹಿಂಸಾಚಾರದಲ್ಲಿ ತೊಡಗಿದೆ. ಈ ಮೂಲಕ ತನ್ನ ಮಾತನ್ನು ತಾನೇ ಮುರಿದಿದೆ.
ಭಯ ಭೀತರಾಗಿರುವ ಮಹಿಳೆಯರು ಹಾಗೂ ಮಕ್ಕಳು ಅಮೆರಿಕ ಸೇ ಬಳಿ ಸಹಾಯ ಮಾಡುವಂತೆ ಮನವಿ ಮಾಡಿದ್ದು, ದಯವಿಟ್ಟು ಕಾಬೂಲ್ ಏರ್‌ಪೋರ್ಟ್ ಒಳಗೆ ನಮ್ಮನ್ನು ಬಿಡಿ ಎಂದು ಗೋಗರೆಯುತ್ತಿದ್ದಾರೆ,.