ಚೀನಾದಲ್ಲಿ ಬೃಹತ್ ಅಗ್ನಿ ಅನಾಹುತವೊಂದು ಸಂಭವಿಸಿದ್ದು, ಬಹುಮಹಡಿ ಕಟ್ಟಡ ಬೆಂಕಿಗಾಹುತಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೀನಾದಲ್ಲಿ ಬೃಹತ್ ಅಗ್ನಿ ಅನಾಹುತವೊಂದು ಸಂಭವಿಸಿದ್ದು, ಬಹುಮಹಡಿ ಕಟ್ಟಡ ಬೆಂಕಿಗಾಹುತಿಯಾಗಿದೆ. ಚೀನಾದಲ್ಲಿ ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಕಂಪನಿಯ ಕಟ್ಟಡದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. 42 ಅಂತಸ್ತಿನ ಈ ಬಹುಮಹಡಿ ಕಟ್ಟಡ ಕ್ಷಣದಲ್ಲೇ ಧಗಧಗ ಎನಿಸಿದೆ. ಚೀನಾದ ಹುನಾನ್ ಪ್ರಾಂತ್ಯದ ಛಂಗ್ಸಾದಲ್ಲಿ ಸೆಪ್ಟಂಬರ್ 16 ರಂದು ಈ ಅನಾಹುತ ಸಂಭವಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಚೀನಾ ಹೇಳಿದೆ. ಬಹು ಮಹಡಿ ಕಟ್ಟಡದಲ್ಲಾದ ಈ ಅಗ್ನಿ ಅನಾಹುತದಿಂದ ಆಕಾಶದೆತ್ತರಕ್ಕೆ ದಟ್ಟ ಹೊಗೆ ಹೋಗುತ್ತಿರುವುದು ಕಾಣಿಸುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ,