ಪಾಕಿಸ್ತಾನ ಸದ್ಯಕ್ಕೆ ಸಂಕಷ್ಟದಲ್ಲಿದೆ. ಒಂದು ಕಡೆ ಆರ್ಥಿಕ ಹೊಡೆತ, ಆರ್ಥಿಕತೆಯಿಂದ ದೇಶದಲ್ಲೇ ವಾತಾವರಣ ಹದಗೆಡುತ್ತಿದೆ. ಮತ್ತೊಂದು ಕಡೆ ತಾಲಿಬಾನ್ ಪಾಕಿಸ್ತಾನಕ್ಕೆ ಗಡಿಯಲ್ಲಿ ತೊಂದ್ರೆ ಕೊಡ್ತಾನೇ ಇದೆ. ಇನ್ನೊಂದು ಕಡೆ ಪಾಕಿಸ್ತಾನದ ಮೇಲೆ ಚೀನಾ ಕೋಪ ಮಾಡಿಕೊಂಡಿದೆ.
ನವದೆಹಲಿ (ಜೂ. 15): ಪಾಕಿಸ್ತಾನ (Pakistan) ಸದ್ಯಕ್ಕೆ ಸಂಕಷ್ಟದಲ್ಲಿದೆ. ಒಂದು ಕಡೆ ಆರ್ಥಿಕ ಹೊಡೆತ, ಆರ್ಥಿಕತೆಯಿಂದ ದೇಶದಲ್ಲೇ ವಾತಾವರಣ ಹದಗೆಡುತ್ತಿದೆ. ಮತ್ತೊಂದು ಕಡೆ ತಾಲಿಬಾನ್ (Taliban) ಪಾಕಿಸ್ತಾನಕ್ಕೆ ಗಡಿಯಲ್ಲಿ ತೊಂದ್ರೆ ಕೊಡ್ತಾನೇ ಇದೆ. ಇನ್ನೊಂದು ಕಡೆ ಪಾಕಿಸ್ತಾನದ ಮೇಲೆ ಚೀನಾ (China) ಕೋಪ ಮಾಡಿಕೊಂಡಿದೆ. ಇದೆಲ್ಲವನ್ನ ನೋಡ್ತಿದ್ರೆ ಪಾಕ್ ಸಧ್ಯ ತುಂಬಾ ಕಷ್ಟದರಲ್ಲಿದೆ ಎಂದೆನಿಸುತ್ತಿದೆ. ಪಾಕಿಸ್ತಾನಕ್ಕೆ ಸಧ್ಯ ಬಿದ್ದಿರೋದು ಒಂದೆರೆಡು ಕೆಟ್ಟ ದೃಷ್ಟಿಗಳಲ್ಲ. ಎಲ್ಲ ದಿಕ್ಕುಗಳಿಂದಲೂ ಪಾಕಿಸ್ತಾನದ ಮೇಲೆ ಕೆಟ್ಟ ದೃಷ್ಟಿ ಬಿದ್ದಿವೆ. ಹೀಗಾಗಿ ಪಾಕಿಸ್ತಾನ ಈಗ ಎಲ್ಲ ದಿಕ್ಕುಗಳಿಂದಲೂ ಏಟುಗಳ ಮೇಲೆ ಏಟುಗಳನ್ನು ತಿನ್ನುತ್ತಿದೆ.
ಇದನ್ನೂ ನೋಡಿ: 18 ತಿಂಗಳಲ್ಲಿ 10 ಲಕ್ಷ ಉದ್ಯೋಗ ನೇಮಕಾತಿ, ಸಂಚಲನ ಸೃಷ್ಟಿಸಿದ ಪ್ರಧಾನಿ ಮೋದಿ ಘೋಷಣೆ!
ಪಾಕಿಸ್ತಾನದ ಮುಂದೆ ಸದ್ಯ ಪ್ರಮುಖವಾಗಿ 4 ಸವಾಲುಗಳಿವೆ. ಈ ಸವಾಲುಗಳನ್ನು ಪಾಕಿಸ್ತಾನ ಸಮರ್ಥವಾಗಿ ನಿಭಾಯಿಸುತ್ತಾ ಅಥವಾ ನಿಭಾಯಿಸದೇ ಸೋತು ನೆಲಕಚ್ಚುತ್ತಾ ಅನ್ನೋದು ಸಹ ಗೊತ್ತಿಲ್ಲ. ಯಾಕೆಂದ್ರೆ ಪಾಕಿಸ್ತಾನದ ಮುಂದಿರುವ 4 ಸವಾಲುಗಳು ಸಾಮಾನ್ಯ ಸವಾಲುಗಳಲ್ಲ. ಪಾಕಿಸ್ತಾನ ಸಧ್ಯಕ್ಕೆ ಎದುರಿಸುತ್ತಿರುವ ಪ್ರಮುಖ 4 ತೊಂದರೆಗಳಲ್ಲಿ ಮೊದಲ ಸ್ಥಾನದಲ್ಲಿರೋದು ಹದಗೆಟ್ಟ ಆರ್ಥಿಕ ವ್ಯವಸ್ಥೆ, ಎರಡನೇಯದು ಭುಗಿಲೇಳುತ್ತಿರುವ ಅಂತರ್ಯುದ್ಧ. ಇನ್ನು ಮೂರನೇಯದು ಪಾಕ್ ಸೈನಿಕರನ್ನು ಕಾಡುತ್ತಿರೋ ತಾಲಿಬಾನಿಗಳು ಮತ್ತು 4ನೇಯದ್ದು ಪಾಕ್ ಮೇಲೆ ಚೀನಾ ಕೋಪ. ಈ ನಾಲ್ಕು ಸಂಕಷ್ಟಗಳಲ್ಲಿ ಸಿಲುಕಿರುವ ಪಾಕ್ ದಿಕ್ಕೇ ತೋಚದಂತಾಗಿ ವಿಲವಿಲವೆಂದು ಒದ್ದಾಡುತ್ತಿದೆ. ಈ ನಾಲ್ಕು ಸಮಸ್ಯೆಗಳಿಂದ ಪಾಕ್ ಈಗ ಹೇಗೆಲ್ಲ ಕಷ್ಟ ಅನುಭವಿಸುತ್ತಿದೆ ಅನ್ನೋದರ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ