ಇಬ್ರಾಹಿಂ ರೈಸಿ ಸಾವನ್ನು ಸಂಭ್ರಮಿಸಿದ ಇರಾನಿ ಜನ..! ಈ ಸಾವು ಆಕಸ್ಮಿಕವೋ..ಷಡ್ಯಂತ್ರವೋ..?

May 23, 2024, 2:36 PM IST

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ(Ebrahim Raisi) ಸಾವನ್ನು ಇರಾನ್‌ನ ಮಹಿಳೆಯರು(Women) ಸಂಭ್ರಮಿಸಿದ್ದಾರೆ. ರೈಸಿ , ಇರಾನ್(Iran) ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದೊಲ್ಲಾಹಿಯಾನ್ ಮತ್ತು ಇತರ ಏಳು ಜನರನ್ನು ಹೊತ್ತ ಹೆಲಿಕಾಪ್ಟರ್ ಭಾನುವಾರ ಅಜೆರ್‌ಬೈಜಾನ್ ಗಡಿಯ ಸಮೀಪ ದೇಶದ ವಾಯುವ್ಯದ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಬಳಿಕ ರೈಸಿ ಸಾವಿಗೆ ಇಸ್ರೇಲ್‌ ಕಾರಣ ಎಂದು ಸಹ ಹೇಳಲಾಗುತ್ತಿತ್ತು. ರೈಸಿ ಸಾವಿಗೆ ನೂರಾರು ಸಂಚುಗಳನ್ನು ಮಾಡಲಾಗಿದೆ ಎಂಬ ಕಥೆಗಳು ಇದೀಗ ಕೇಳಿಬರುತ್ತಿವೆ. ರೈಸಿಗೆ ಟೆಹ್ರಾನ್‌ನ ಕಟುಕ ಎಂಬ ಬಿರುದನ್ನು ಸಹ ಕೊಡಲಾಗಿದೆ. ಇನ್ನೂ ಹಿಜಾಬ್‌ ಕಡ್ಡಾಯ ಮಾಡಿದ್ದಕ್ಕೆ ಇರಾನ್‌ ಮಹಿಳೆಯರು ದಂಗೆ ಎದ್ದಿದ್ದರು.

ಇದನ್ನೂ ವೀಕ್ಷಿಸಿ:  Ratna Bhandar Key Lost: ಜಗನ್ನಾಥನ ಖಜಾನೆಯಲ್ಲಿ 150 ಕೆ.ಜಿ ಚಿನ್ನ ಬೆಳ್ಳಿ ವಜ್ರ.. ಏನಿದು ರತ್ನ ಭಂಡಾರ..?