ರಷ್ಯಾ- ಉಕ್ರೇನ್ ಜಾಗತಿಕ ಯುದ್ಧದಲ್ಲಿ ಅಮೆರಿಕಾ ಮಧ್ಯ ಪ್ರವೇಶಿಸಿದೆ. ಉಕ್ರೇನ್‌ಗೆ ನೆರವು ನೀಡುವಂತೆ ಅಮೆರಿಕಾ ಕೋರಿತ್ತು. ಅದರಂತೆ ಪೊಲೇಂಡ್ ನೆರವು ನೀಡಲು ಮುಂದೆ ಬಂದಿತ್ತು. ಆದರೆ ಪೊಲೇಂಡ್ ಷರತ್ತಿಗೆ ಅಮೆರಿಕಾ ಒಪ್ಪದೇ ಇದ್ದಿದ್ದರಿಂದ ಪೊಲೇಂಡ್ ಸೈಲೆಂಟಗಿದೆ.

ಇನ್ನೊಂದೆಡೆ ರಷ್ಯಾಕ್ಕೆ ತೈಲ ಶಾಕ್ ನೀಡಲು ನಿರ್ಧರಿಸಿರುವ ಅಮೆರಿಕ, ರಷ್ಯಾದಿಂದ ಎಲ್ಲಾ ರೀತಿಯ ತೈಲೋತ್ಪನ್ನಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ. ಇದರ ಜೊತೆಗೆ ಯುರೋಪಿಯನ್ ಒಕ್ಕೂಟಗಳು ಕೂಡಾ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ರಷ್ಯಾ ಆದಾಯದ ಪ್ರಮಖ ಮೂಲವಾಗಿರುವ ಕಚ್ಚಾ ತೈಲದ ಆಮದನ್ನು ನಿರ್ಬಂಧಿಸಬೇಕು ಎಂಬ ಉಕ್ರೇನ್ ಅಧ್ಯಕ್ಷ ಜೆಲೆಸ್ಕಿ ಅವರ ಮನವಿಯ ನಂತರ ಈ ಬೆಳವಣಿಗೆ ನಡೆದಿದೆ. ಆದರೆ ಅಮೆರಿಕಾದ ನಿರ್ಧಾರಕ್ಕೆ ಯುರೋಪಿಯನ್ ರಾಷ್ಟ್ರಗಳು ಒಪ್ಪಿಗೆ ನೀಡಿಲ್ಲ. ಇದರಿಂದ ದೊಡ್ಡಣ್ಣ ಅಮೆರಿಕಾಗೆ ಮುಖಭಂಗವಾಗಿದೆ.