ಕಾರವಾರ: ಯಲ್ಲಾಪುರ (Yallapura) ಅರಣ್ಯಪ್ರದೇಶದಲ್ಲಿ ಕಾಣಿಸಿಕೊಂಡ ಕಪ್ಪು ಚಿರತೆ (Black Panther) ಮರಿಯ ವಿಡಿಯೋವೊಂದು ವೈರಲ್ ಆಗಿದೆ. ಚಿರತೆ ಮರಿಯ ತುಂಟಾಟವನ್ನು ಅರಣ್ಯಾಧಿಕಾರಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.ಮರಿಯನ್ನು ಹುಡುಕುತ್ತಾ ಅತ್ತಿತ್ತ ಅಲೆಯುತ್ತಿರುವ ತಾಯಿ ಚಿರತೆ ಅಲೆಯುತ್ತಿದೆ. ಯಲ್ಲಾಪುರ ಅರಣ್ಯದಲ್ಲಿ ಕರಿ ಚಿರತೆಯೊಂದು ಮೂರು ಮರಿಗಳನ್ನು ಹಾಕಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಹೆಚ್ಚಾಗಿ ಕಪ್ಪು ಚಿರತೆಗಳು ಕಾಣಿಸಿಕೊಳ್ಳುತ್ತಿವೆ.