ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!

ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!

Published : Dec 31, 2025, 01:11 PM IST

ಕನ್ನಡ ಹಾಗೂ ತಮಿಳು ಕಿರುತೆರೆ ನಟಿ ನಂದಿನಿ ಬೆಂಗಳೂರಿನಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಅನುಕಂಪದ ಆಧಾರದ ಮೇಲೆ ಸಿಕ್ಕ ಸರ್ಕಾರಿ ಕೆಲಸವೇ ತನ್ನ ಸಾವಿಗೆ ಕಾರಣವೆಂದು ಡೆತ್‌ನೋಟ್‌ನಲ್ಲಿ ಬರೆದಿದ್ದು, ನಟನೆ ಮತ್ತು ಸುರಕ್ಷಿತ ಉದ್ಯೋಗದ ನಡುವಿನ ಸಂಘರ್ಷ ಈ ದುರಂತಕ್ಕೆ ಕಾರಣವಾಗಿದೆ.

ಬೆಂಗಳೂರು (ಡಿ.31): ಸುಂದರ ಮುಖ, ಕಣ್ಣಿನಲ್ಲಿ ನೂರಾರು ಕನಸುಗಳು, ಕಿರುತೆರೆಯಲ್ಲಿ ತನ್ನದೇ ಆದ ಗುರುತು ಮೂಡಿಸುತ್ತಿದ್ದ ಪ್ರತಿಭೆ.. ಇವೆಲ್ಲವೂ ಈಗ ನೆನಪು ಮಾತ್ರ. ಕನ್ನಡ ಹಾಗೂ ತಮಿಳು ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ನಂದಿನಿ (Serial Actress Nandini), ಬೆಂಗಳೂರಿನ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವುದು ಕಲಾ ಲೋಕಕ್ಕೆ ದೊಡ್ಡ ಆಘಾತ ನೀಡಿದೆ. ವಿಪರ್ಯಾಸವೆಂದರೆ, ಈಕೆಯ ಸಾವಿಗೆ ಕಾರಣವಾಗಿದ್ದು ಯಾರೂ ಕನಸು ಕಾಣುವ 'ಸರ್ಕಾರಿ ಕೆಲಸ' ಎಂಬುದು ಈಗ ಬೆಚ್ಚಿಬೀಳಿಸುವ ಸತ್ಯ.

ಅನುಕಂಪದ ಕೆಲಸವೇ ಆಪತ್ತಾಯಿತೇ?  

ನಂದಿನಿ ಅವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರು. 2021ರಲ್ಲಿ ಅವರು ನಿಧನರಾದಾಗ, ಅನುಕಂಪದ ಆಧಾರದ ಮೇಲೆ ಮಗಳು ನಂದಿನಿಗೆ ಸರ್ಕಾರಿ ಕೆಲಸ ಲಭಿಸಿತ್ತು. ಆದರೆ, ನಂದಿನಿಗೆ ನಟನೆಯ ಮೇಲೆ ಅಪಾರ ಪ್ರೀತಿ ಇತ್ತು. ಬಣ್ಣದ ಲೋಕದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಕೆಯ ಆಸೆಗೂ, ಕುಟುಂಬದವರು ಬಯಸುತ್ತಿದ್ದ ಭದ್ರತೆಯ ಜೀವನಕ್ಕೂ ನಡುವೆ ದೊಡ್ಡ ಗೋಡೆಯೇ ನಿರ್ಮಾಣವಾಗಿತ್ತು. ಇನ್ನು ನಟಿ ನಂದಿನಿಯ ಅಪ್ಪ-ಅಮ್ಮ ಶಿಕ್ಷಕರಾಗಿದ್ದರೂ ಅವರ ತಾತ ನಟನೆಯಲ್ಲಿ ಪಳಗಿದ ಕಲಾವಿದರಾಗಿದ್ದರು. ಹೀಗಾಗಿ, ನಟಿ ನಂದಿನಿಗೆ ಕಲೆ ಎಂಬುದು ಜನ್ಮಗತವಾಗಿ ರಕ್ತದಿಂದಲೇ ಬಳುವಳಿಯಾಗಿ ಬಂದಿತ್ತು.

ಡೆತ್‌ನೋಟ್‌ನಲ್ಲಿ ಅಡಗಿದೆ ನೋವಿನ ನುಡಿ

ಸಾಯುವ ಮುನ್ನ ನಂದಿನಿ ಬರೆದಿಟ್ಟಿರುವ ಡೈರಿಯ ಪುಟಗಳು ಆಕೆಯ ಮನಸ್ಥಿತಿಯನ್ನು ಬಿಂಬಿಸುತ್ತಿವೆ. 'ನನ್ನ ಸಾವಿಗೆ ನನಗೆ ಸಿಕ್ಕ ಸರ್ಕಾರಿ ಕೆಲಸವೇ ಕಾರಣ' ಎಂದು ಆಕೆ ಬರೆದುಕೊಂಡಿರುವುದು ತನಿಖೆಯ ದಿಕ್ಕನ್ನೇ ಬದಲಿಸಿದೆ. ತನಗೆ ಇಷ್ಟವಿಲ್ಲದ ಕೆಲಸಕ್ಕೆ ಸೇರಲು ಕುಟುಂಬದಿಂದ ಬಂದ ಒತ್ತಡ ಅಥವಾ ಆ ಕೆಲಸದಿಂದಾಗಿ ತನ್ನ ನಟನಾ ವೃತ್ತಿಗೆ ಅಡ್ಡಿಯಾಗಬಹುದು ಎಂಬ ಆತಂಕ ಆಕೆಯನ್ನು ಬಲಿಪಡೆದಿದೆ ಎನ್ನಲಾಗುತ್ತಿದೆ.

ಅಮ್ಮ-ಮಗಳ ನಡುವಿನ ಜಗಳ

ನಟನೆಯನ್ನು ಬಿಟ್ಟು ಸರ್ಕಾರಿ ಕೆಲಸಕ್ಕೆ ಸೇರಿ ಜೀವನವನ್ನು ಸುಸ್ಥಿತಿಗೆ ತಂದುಕೋ ಎಂಬುದು ತಾಯಿ ನೀಡುತ್ತಿದ್ದ ಸಲಹೆಯಾಗಿತ್ತು. ಇದೇ ವಿಷಯವಾಗಿ ಅಮ್ಮ-ಮಗಳ ನಡುವೆ ಆಗಾಗ ಮನಸ್ಥಾಪಗಳು ಉಂಟಾಗುತ್ತಿದ್ದವು ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಯಿ, 'ನಾನು ಮಗಳ ಕ್ಷೇಮಕ್ಕಾಗಿ ಬುದ್ಧಿಮಾತು ಹೇಳಿದ್ದೆನೇ ಹೊರತು ಎಂದಿಗೂ ಬಲವಂತ ಮಾಡಿರಲಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ.

ಒಟ್ಟಿನಲ್ಲಿ, ಮಾತುಕತೆಯ ಮೂಲಕ ಬಗೆಹರಿಯಬೇಕಿದ್ದ ಸಣ್ಣ ಸಮಸ್ಯೆಯೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಇನ್ನಷ್ಟು ಬಾಳಿ ಬದುಕಬೇಕಿದ್ದ ಪ್ರತಿಭಾನ್ವಿತ ನಟಿಯೊಬ್ಬಳು ಸಮಾಜದ 'ಭದ್ರತೆ' ಎಂಬ ಪರಿಕಲ್ಪನೆಗೆ ಬಲಿಯಾಗಿದ್ದು ನಿಜಕ್ಕೂ ವಿಷಾದನೀಯ.

04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more