ಕುಡ್ಲ ಗೋಡೆ ತುಂಬಾ ಬೆಡಗಿನ ಸಂಸ್ಕೃತಿ ಚಿತ್ತಾರ!

Apr 23, 2022, 3:57 PM IST

ತುಳುನಾಡಿನ ಕಂಬಳ, ಕೋಲ, ನೇಮೋತ್ಸವ, ಬಂಡಿ, ಕೋಳಿ ಅಂಕ, ರಥೋತ್ಸವ, ವೀರರಾಣಿ ಅಬ್ಬಕ್ಕ, ಪರಶುರಾಮ, ಕೋಟಿ ಚೆನ್ನಯ ಕಲಾಕೃತಿಗಳು, ಯಕ್ಷಗಾನ, ಅಮೃತ ಮಹೋತ್ಸವದಲ್ಲಿರುವ ರಾಮಕೃಷ್ಣ ಮಿಷನ್, ಅ(ಹಂ)ಪ್ಪನ ಕಟ್ಟೆ, ಜಂಬೂ ಸವಾರಿ, ಹಂಪಿ ರಥೋತ್ಸವ ಸೇರಿದಂತೆ ಸಾಮಾಜಿಕ ಜಾಗೃತಿ ಸಂದೇಶ, ಚಿತ್ರಗಳು, ಶಿಕ್ಷಣ ಜಾಗೃತಿ, ಆರೋಗ್ಯ, ಕ್ಲೀನ್-ಗ್ರೀನ್ ಕುಡ್ಲ, ಕೃಷಿ ಕೃಲಾಕೃತಿಗಳು ಮಂಗಳೂರು ‌ನಗರದಲ್ಲಿ ಸದ್ಯ ಗಮನ ಸೆಳೆಯುತ್ತಿವೆ. 

ವೆನ್ಲಾಕ್‌ನಿಂದ ಕ್ಲಾಕ್‌ಟವರ್‌ವರೆಗೆ 1350 ಫೀಟ್ ಉದ್ದದ ಆವರಣ ಗೋಡೆಯಲ್ಲಿ  94 ಕಲಾಕೃತಿಗಳು ಮೂಡಿ ಬಂದಿದ್ದು, 25ರಿಂದ 30ಕಲಾವಿದರು ಕಲಾಕೃತಿ ರಚನೆಯಲ್ಲಿ ತೊಡಗಿದ್ದಾರೆ. ನಮ್ಮ ಮಂಗಳೂರು ನಿಜವಾಗಿಯೂ ದೇಶದ ಸುಂದರ, ಸ್ಬಚ್ಛ ನಗರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಅವರಿಗೆ ನಮ್ಮ ಕಲೆಯ ಬಗ್ಗೆ ಪರಿಚಯಿಸುವುದರೊಂದಿಗೆ, ನಗರದ ಪ್ರಮುಖ ರಸ್ತೆಯ ತಡೆಗೋಡೆಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಕಾಪಾಡುವುದು ಇದರ ಹಿಂದಿರುವ ಉದ್ದೇಶ  ಎನ್ನುತ್ತಾರೆ ಸ್ವಚ್ಛ ಮಂಗಳೂರು ಫೌಂಡೇಶನ್‌ನ ದಿಲ್‌ರಾಜ್ ಆಳ್ವ.

50 ರ ನಂತರವೂ 35 ವರ್ಷದವರಂತೆ ಕಾಣಬೇಕೆನಿಸಿದರೆ ಇದನ್ನ ಮಾಡಿ

ವಾಲ್ ಪೈಂಟ್ ಮುಗಿದ ಭಾಗದಲ್ಲಿ ನಗರದ ಹೃದಯಭಾಗದ ಒಂದು ಜಾಗವನ್ನು ಗುರುತಿಸಿ ‘ಐ ಲವ್ ಕುಡ್ಲ’ ಸ್ಲೋಗನ್‌ವೊಂದನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಸ್ಲೋಗನ್ 20 ಅಡಿ ಅಗಲ, 4 ಅಡಿ ಎತ್ತರವಿದ್ದು, ಆಕರ್ಷಣೀಯವಾಗಿದೆ. ಮಂಗಳೂರು ರಾಮಕೃಷ್ಣ ಮಿಷನ್‌ನ್‌ನಿಂದ ಸ್ವಚ್ಛತೆಯ ಬಗ್ಗೆ ಭಾರೀ ಸಂಚಲನ ಮೂಡಿಸಿದ ‘ಸ್ವಚ್ಛ ಮಂಗಳೂರು’ ಅಭಿಯಾನ ಮೇ ತಿಂಗಳಿನಿಂದ ಮತ್ತೆ ಆರಂಭವಾಗಲಿದೆ. ಇದರ ಪೂರ್ವಭಾವಿಯಾಗಿ ವಾಲ್‌ಪೈಂಟ್ ಕಾರ್ಯಕ್ರಮ ಆಯೋಜಿಸಲಾಗಿದೆ.
2015ರ ಫೆ.1ರಂದು ಆರಂಭಗೊಂಡ ಸ್ವಚ್ಛ ಮಂಗಳೂರು ಅಭಿಯಾನ 2019ರ ಸೆ.29ರಂದು ಸಮಾರೋಪಗೊಂಡಿತ್ತು. ಸುಮಾರು 5ವರ್ಷಗಳ ಕಾಲ ನಡೆದ ಅಭಿಯಾನದಲ್ಲಿ  250ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು, 2500ಕ್ಕೂ ಅಧಿಕ ಶ್ರಮದಾನ ನಡೆಸಲಾಗಿತ್ತು.

ಹಿಜಾಬ್ ಧರಿಸಿದ, ಕುಂಚ ಹಿಡಿದ ಮಹಿಳೆ ಇಂದಿನ Google doodleನಲ್ಲಿ.. ಯಾರೀಕೆ?

ಮಂಗಳೂರು ನಾಗರಿಕರ ಆಗ್ರಹದ ಮೇರೆಗೆ ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರು ಫೌಂಡೇಶನ್ ‘ಸ್ವಚ್ಛ ಭಾರತ್ ಮಿಷನ್ 2.0’ ಅಭಿಯಾನವನ್ನು ಮುಂದುವರಿಸಲಿದೆ. ಈ ಅಭಿಯಾನ ಮೇ 15ರೊಳಗೆ ಉದ್ಘಾಟನೆಯಾಗಲಿದ್ದು, ಕೇಂದ್ರ ಸಚಿವರು ಆಗಮಿಸುವ ನಿರೀಕ್ಷೆಯಿದೆ. ರಾಮಕೃಷ್ಣ ಮಿಷನ್ ಮಾರ್ಗದರ್ಶನದಡಿ ಸ್ವಚ್ಛ ಮಂಗಳೂರು ಫೌಂಡೇಶನ್ ಮೂಲಕ ನಗರದ ಹಂಪನಕಟ್ಟೆ ಬಳಿ ವಾಲ್‌ಪೈಂಟಿಂಗ್ ನಡೆಯುತ್ತಿದೆ. ಕ್ಲೀನ್ ಎಂಡ್ ಗ್ರೀನ್ ಮಂಗಳೂರು ಧ್ಯೇಯೋದ್ದೇಶದೊಂದಿಗೆ ಈ ಚಿತ್ರಕಲೆಗಳು ಮೂಡಿ ಬರುತ್ತಿದ್ದು, ಇದರಲ್ಲಿ ತುಳುನಾಡಿನ ವೈವಿಧ್ಯತೆ ಅನಾವರಣಗೊಂಡಿದೆ.

ಒಟ್ಟಾರೆ ಈ ಚಿತ್ರಕಲೆಗಳು ಮಂಗಳೂರಿಗೆ ಮತ್ತೊಂದು ಮೆರಗು ತಂದಿದೆ. ಜೊತೆಗೆ ಕರಾವಳಿ ಸಂಸ್ಕೃತಿಯ ಪರಿಚಯ ಮಾಡಿಸುತ್ತಿದೆ....