ಸಾಲು ಸಾಲು ರಜೆ, ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಕಲರವ

Apr 25, 2022, 12:59 PM IST

ಕೊಡಗು(Kodagu) ಜಿಲ್ಲೆಯ ಎಲ್ಲಾ ನಗರಗಳು ಸಾಮಾನ್ಯವಾಗಿ ಟ್ರಾಫಿಕ್(traffic) ಕಿರಿಕಿರಿಯಿಂದ ಮುಕ್ತ ಆಗಿರುತ್ತವೆ. ಆದ್ರೆ ಈ ವಾರಾಂತ್ಯ ಮಾತ್ರ ಕೊಡಗು ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಎಲ್ಲಿ ನೋಡಿದ್ರೂ ರಶ್ಶೋ ರಶ್ಶು. ವಾಹನಗಳ ಕಿರಿಕಿರಿ.. ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿರೋ ವಾಹನಗಳು. ಅಷ್ಟಕ್ಕೂ ಇವೆಲ್ಲ ಸ್ಥಳೀಯರ ವಾಹನಗಳಲ್ಲ. ಬದಲಿಗೆ ಎಲ್ಲವೂ ಹೊರ ಜಿಲ್ಲೆ, ರಾಜ್ಯಗಳಿಂದ ಬಂದಿರುವ ಪ್ರವಾಸಿಗರ ವಾಹನಗಳು. ವಾರಾಂತ್ಯ ಸಾಲು ಸಾಲು ರಜೆ ಬಂದ ಹಿನ್ನೆಲೆಯಲ್ಲಿ ಲಕ್ಷಾಂತರ ಪ್ರವಾಸಿಗರು ಕೊಡಗು ಜಿಲ್ಲೆಗೆ ಮುಗಿ ಬಿದ್ದಿದ್ದಾರೆ. 
ಬಸ್ಸು ಕಾರು ಅಂತ ಜಿಲ್ಲೆಯತ್ತ ಮುಖ ಮಾಡಿದ್ದಾರೆ. ಮಡಿಕೇರಿ(madikeri) ನಗರದಲ್ಲಂತೂ ಟ್ರಾಫಿಕ್ ಜಾಮ್ ಆಗಿ ಸ್ಥಳೀಯರು ಪ್ರವಾಸಿಗರು ಎಲ್ಲರೂ ಪರದಾಡುವಂತಾಗಿದೆ. ಪ್ರವಾಸಿಗರ ಪ್ರವಾಹದಿಂದಾಗಿ ಕೊಡಗು ಜಿಲ್ಲೆಯ ಪ್ರವಾಸೀ ತಾಣಗಳು ತುಂಬಿ ತುಳುಕುತ್ತಿವೆ. ವಿಶೇಷ ಅಂದ್ರೆ ಕಳೆದ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ  ಪ್ರವಾಸೀ ತಾಣಗಳು ಇಷ್ಟೊಂದು ರಶ್​ ಆಗಿವೆ.  

ಇನ್ನು ಜಿಲ್ಲೆಯ ಪ್ರವಾಸೀ ತಾಣಗಳಿಗೆ ಪ್ರವಾಸಿಗರು ಮುಗಿ ಬಿದ್ದಿರೋದ್ರಿಂದ ಸಹಜವಾಗಿಯೇ ಇಲ್ಲಿನ ಹೋಂಸ್ಟೇಗಳು, ರೆಸಾರ್ಟ್​ಗಳು ಮತ್ತು ಲಾಡ್ಜ್​ಗಳು ತುಂಬಿ ತುಳುಕುತ್ತಿವೆ ಎಲ್ಲವೂ ಹೌಸ್​ ಫುಲ್ ಆಗಿವೆ. ಬಹಳಷ್ಟು ಪ್ರವಾಸಿಗರು ಜಿಲ್ಲೆಗೆ ಬಂದು ವಾಸ್ತವ್ಯ ಹೂಡಲು ಏನೂ ಸಿಗದೆ ಹಿಂದಿರುಗುತ್ತಿದ್ದಾರೆ. ಪ್ರಕೃತಿ ವಿಕೋಪ ಕೊರೊನಾ ಲಾಕ್​ಡೌನ್​ನಿಂದ ಕೋಟಿ ಕೋಟಿ ರೂ ನಷ್ಟ ಅನುಭವಿಸಿದ್ದ ಪ್ರವಾಸೋಧ್ಯಮಿಗಳು ಇದೀಗ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. 

Marriage Tips : ನಿಶ್ಚಿತಾರ್ಥಕ್ಕೆ ಮುನ್ನವೇ ಹುಡುಗಿ ಇಟ್ಟ ಡಿಮ್ಯಾಂಡ್ ಕೇಳಿ ಕಂಗಾಲಾದ ಹುಡುಗ

ಇನ್ನೊಂದು ತಿಂಗಳು ಬೇಸಗೆ ಇರೋದ್ರಿಂದ ಈ ಅವಧಿ ಪ್ರವಾಸಕ್ಕೆ ಬಹಳ ಸೂಕ್ತವೆನಿಸಿದೆ. ಜೂನ್​ ನಿಂದ ಮಳೆ ಆರಂಭವಾದ್ರೆ ಪ್ರವಾಸಿಗರಿಗೂ ಕಷ್ಟ. ಅದೂ ಅಲ್ಲದೆ, ಶಾಲಾ ಕಾಲೇಜುಗಳಿಗೂ ಇದೀಗ ರಜೆ ಇರೋದ್ರಿಂದ ಪ್ರವಾಸಿಗರು ಕೊಡಗು ಜಿಲ್ಲೆಗೆ ಪ್ರವಾಸ ಬರಲು ಆಸಕ್ತಿ ತೋರುತ್ತಿದ್ದಾರೆ. ಅಷ್ಟೇ ಅಲ್ಲದೆ, ಜೂನ್ ಬಳಿಕ ಕೊರೊನಾ ಹೊಸ ಅಲೆಯೇನಾದ್ರೂ ಶುರುವಾಗಿ ಬಿಡುತ್ತಾ 
ಅನ್ನೋ ಭಯವೂ ಜನರಿಗಿದೆ.