ಮಳೆಗಾಲದ ಸೊಬಗು: ಮೈದುಂಬಿ ನಿಂತಿದೆ ಮುಳ್ಳಯ್ಯನಗಿರಿ..!

Aug 1, 2021, 10:30 AM IST

ಚೆಲುವನ್ನೇ ಮೈಗೆತ್ತಿಕೊಂಡಂತೆ ತನ್ನ ನೈಜ ನೈಸರ್ಗಿಕ ಸೊಬಗಿನಿಂದಲೇ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿರುವ ಮುಳ್ಳಯ್ಯನ ಗಿರಿಯಲ್ಲೀಗ ಪ್ರವಾಸಿಗರ ಕಲರವ. ಕರ್ನಾಟಕದ ಅತೀ ಎತ್ತರ ಶಿಖರವೆಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳಯ್ಯನಗಿರಿಗೆ ಜೂನ್ ತಿಂಗಳಿನಿಂದ ಸಪ್ಟೆಂಬರ್ ವರೆಗೆ ಪ್ರವಾಸಿಗರಿಗೆ ಸೂಕ್ತ ಕಾಲವಾಗಿರುವುದರಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.ಈ ಕುರಿತು ಒಂದು ವರದಿ ಇಲ್ಲಿದೆ.

ಮೈಸೂರು ಮೃಗಾಲಯದಲ್ಲಿ ಮುದ್ದು ಜಿರಾಫೆ ಮರಿಗಳು

ಮಳೆಗಾಲ ಬಂತೆಂದರೆ ಸಾಕು ಸಣ್ಣ ಪುಟ್ಟ ಹಳ್ಳ ಕೊಳ್ಳ ತುಂಬಿ, ಚಿಕ್ಕ ಚಿಕ್ಕ ತೊರೆಗಳಿಂದ ಹಿಡಿದು ಬಾನೆತ್ತರದಿಂದ ಧುಮ್ಮಿಕ್ಕುವ ಜಲಪಾತಗಳು ಸೌಂದರ್ಯವನ್ನೇ ಹೊದ್ದು ನಿಲ್ಲುತ್ತವೆ. ಈ ಸೊಬಗು ಮುಳ್ಳಯ್ಯನಗಿರಿಯಲ್ಲೂ ಇದೆ. ಅತ್ಯಂತ ಅಧ್ಬುತ ವ್ಯೂ ಕೊಡುತ್ತಿರೋ ಜಲಪಾತ ನೋಡಲು ಪ್ರವಾಸಿಗರು ಧಾವಿಸುತ್ತಿದ್ದಾರೆ.