ಇಡೀ ದೇಶವೇ ನಿಮ್ಮ ಸಾಧನೆಯನ್ನು ಸಂಭ್ರಮಿಸುತ್ತಿದೆ: ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಶ್ಲಾಘನೆ

Aug 5, 2021, 6:06 PM IST

ಟೋಕಿಯೋ(ಆ.05): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತದ ಹಾಕಿ ತಂಡವು ಕಂಚಿನ ಪದಕ ಗೆದ್ದು ಬೀಗಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಪದಕ ಗೆಲ್ಲುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಹಾಕಿ ತಂಡಕ್ಕೆ ಕರೆಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಜರ್ಮನಿ ಎದುರು ಭಾರತ ಹಾಕಿ ತಂಡವು 5-4 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಇದರೊಂದಿಗೆ 1980ರ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾರತಕ್ಕಿಂದು ಐತಿಹಾಸಿಕ ದಿನ: ಹಾಕಿ ಗೆಲುವನ್ನು ಸುಂದರವಾಗಿ ಬಣ್ಣಿಸಿದ ಪ್ರಧಾನಿ ಮೋದಿ

ಭಾರತ ಹಾಕಿ ತಂಡದ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಒಂದು ತಂಡವಾಗಿ ನಿಮ್ಮೆಲ್ಲರ ಪರಿಶ್ರಮದಿಂದ ಈ ಪದಕ ಗೆದ್ದಿದ್ದೀರ, ಎಲ್ಲಾ ಆಟಗಾರರಿಗೂ ನನ್ನ ಶುಭಹಾರೈಕೆಗಳು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲರೂ ಭೇಟಿಯಾಗೋಣ ಎಂದು ಮೋದಿ ತಿಳಿಸಿದ್ದಾರೆ. ಮೋದಿ ಹಾಕಿ ತಂಡದ ಜತೆ ಏನೆಲ್ಲಾ ಮಾತಾಡಿದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ