Nov 27, 2019, 9:38 PM IST
ಉಡುಪಿ(ನ. 27) ದಿನದಿಂದ ದಿನಕ್ಕೆ ಜಗತ್ತು ಸ್ಮಾರ್ಟ್ ಆಗುತ್ತಿದೆ. ಸ್ಮಾರ್ಟ್ ಪೋನ್, ಸ್ಮಾರ್ಟ್ ಕಾರ್ಡ್, ಸ್ವಾರ್ಟ್ ವಾಚ್ ಏನುಂಟು ಏನಿಲ್ಲ?! ಜನರ ಲೈಫು ಕೂಡಾ ಸ್ಮಾರ್ಟ್ ಆಗ್ತಿದೆ, ವಿದ್ಯಾರ್ಥಿಗಳು ಕೂಡಾ ಸಖತ್ ಸ್ಮಾರ್ಟ್ ಆಗ್ತಿದ್ದಾರೆ. ಅದರಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ಮಾರ್ಟ್ ನೆಸ್ ಹೇಗಿರುತ್ತೆ ಗೊತ್ತಾ? ಸದ್ಯ ಎಲ್ಲಾ ಕಡೆ ಈ ವಿಡಿಯೋ ವೈರಲ್ ಆಗ್ತಿದೆ.
ವಾಟ್ಸಪ್ ನಲ್ಲಿ ಹೊಸ ಫೀಚರ್ ಬಂದಿದೆ!
ಮಣಿಪಾಲದ ಎಂಐಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ವಿದ್ಯಾರ್ಥಿಯೊಬ್ಬ ನಕಲು ಮಾಡಲು ಅದೆಷ್ಟು ಸ್ಮಾರ್ಟ್ ಪ್ಲಾನ್ ಮಾಡಿದ್ದಾನೆ ನೋಡಿ. ಸ್ಮಾರ್ಟ್ ವಾಚ್ ಧರಿಸಿ ಕಾಪಿ ಹೊಡೆದ ಸ್ಟೈಲ್ ಹೇಗಿತ್ತು ನೋಡಿ. ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಉತ್ತರವನ್ನು ಮೊದಲೇ ಈ ವಾಚ್ ಗೆ ಅಪ್ಲೋಡ್ ಮಾಡ್ಕೊಂಡಿದ್ದಾನೆ. ಯಾರಿಗೂ ಡೌಟ್ ಬರದಂತೆ ಬೇಕು ಬೇಕಾದ ಹಾಗೆ ಜೂಮ್ ಮಾಡಿಕೊಂಡು ಉತ್ತರ ಬರೆಯುವ ಹೊಂಚು ಹಾಕಿದ್ದಾನೆ. ಆದ್ರೆ ಇನ್ವಿಜಿಲೇಟರ್ ಆ ವಿದ್ಯಾರ್ಥಿಗಿಂತಲೂ ಸ್ಮಾರ್ಟ್ ಇದ್ದುದರಿಂದ ಪ್ಲಾನ್ ಬಯಲಾಗಿದೆ.
ಕೊಠಡಿಯಲ್ಲೇ ವಿದ್ಯಾರ್ಥಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಚಾಪೆಯೊಳಗೆ ತೂರುವ ವಿದ್ಯಾರ್ಥಿಗೆ ರಂಗೋಲಿಯೊಳಗೆ ತೂರಿದ ಉಪನ್ಯಾಸಕ ಶಾಕ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿ ಮರೆತುಬಿಡಿ, ನೀವೇನಾದ್ರೂ ಇದೇ ತಂತ್ರ ಮಾಡೋಕೆ ಹೋದ್ರೆ ಸಿಕ್ಕಿಬೀಳ್ತೀರಾ ಜೋಕೆ .. ಎಚ್ಚರ