Oct 4, 2022, 4:18 PM IST
ಬೆಂಗಳೂರು (ಅ. 04): ಒಂದು ವಾರದಿಂದ ಆನ್ಲೈನ್ ಶಾಪಿಂಗ್ (Online Shopping) ಅಪ್ಲಿಕೇಶನ್‌ಗಳಲ್ಲಿ ಗ್ರಾಹಕರನ್ನ ಸೆಳೆಯಲು ದೊಡ್ಡ ದೊಡ್ಡ ಆಫರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು ಆ್ಯಪ್‌ನಲ್ಲಿ 40% ಆಫರ್ ಇದ್ರೆ, ಇನ್ನೊಂದು ಅಪ್ಲಿಕೇಶನಲ್ಲಿ 50% ಆಫರ್ ಇರುತ್ತೆ. ಇದನ್ನು ನೋಡಿದ ಜನ ಆನ್ಲೈನ್‌ನಲ್ಲಿ ತಮಗೆ ಬೇಕಾದ ಬೆಲೆ ಬಾಳುವ ವಸ್ತುಗಳನ್ನ ಹಿಂದೆ ಮುಂದೆ ನೋಡದೆ ಪರ್ಚೇಸ್ ಮಾಡುತ್ತಿದ್ದಾರೆ. ಇದೇ ತರ ಉತ್ತರಪ್ರದೇಶದ ವಿದ್ಯಾರ್ಥಿ ₹70,000 ಲ್ಯಾಪ್ಟಾಪ್ ಖರೀದಿ ಮಾಡಿ ಮೋಸ ಹೋಗಿದ್ದಾನೆ. ಆರ್ಡರ್ ಮಾಡಿದ್ದು ಲ್ಯಾಪ್ಟಾಪ್ ಆದ್ರೆ ಬಂದಿದ್ದು ಮಾತ್ರ ಸೋಪ್. ಆರ್ಡರ್ ರಿಸೀವ್ ಮಾಡುವಾಗ ಈ ಯುವಕ ಓಪನ್ ಬಾಕ್ಸ್ ಡೆಲಿವರಿ ರೂಲನ್ನು (Open Box Delivery) ಫಾಲೋ ಮಾಡಿರಲಿಲ್ಲ. ಹಾಗಾದ್ರೆ ಏನಿದು ಓಪನ್ ಬಾಕ್ಸ್ ಕಾನ್ಸೆಪ್ಟ್ ಅಂತೀರಾ? ಇಲ್ಲಿದೆ ಇಂಟ್ರಸ್ಟಿಂಗ್ ರಿಪೋರ್ಟ್