*ಚಂದ್ರು ಕುಟುಂಬಕ್ಕೆ ಶಾಸಕ ಜಮೀರ್ ಅಹಮದ್ ಪರಿಹಾರ
*ಚಂದ್ರು ಸಾಕುತ್ತಿದ್ದ ಅಜ್ಜಿಗೆ ಜಮೀರ್ ಅಹಮದ್ 2 ಲಕ್ಷ ರೂ
*ಕೊಲೆಗೆ ಕಾರಣ ವಿವರಿಸಿದ ಶಾಸಕ ಜಮೀರ್ ಅಹಮದ್
ಬೆಂಗಳೂರು (ಏ. 06): ಜೆಜೆ ನಗರದಲ್ಲಿ ಕೊಲೆಯಾದ ಚಂದ್ರು ಕುಟುಂಬಕ್ಕೆ ಶಾಸಕ ಜಮೀರ್ ಅಹಮದ್ ಪರಿಹಾರ ನೀಡಿದ್ದಾರೆ. ಚಂದ್ರು ಸಾಕುತ್ತಿದ್ದ ಅಜ್ಜಿಗೆ ಜಮೀರ್ ಅಹಮದ್ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಚಂದ್ರು ಕೊಲೆಗೆ ಶಾಸಕ ಜಮೀರ್ ಅಹಮದ್ ಕಾರಣ ವಿವರಿಸಿದ್ದು "ಚಿಕನ್ ರೋಲ್ ತಿನ್ನೋದಕ್ಕೆ ಚಂದ್ರು ರಾತ್ರಿ 2 ಗಂಟೆಗೆ ಹೋಗಿದ್ದಾರೆ. ವಾಪಸ್ ಬರೋವಾಗ ಬೈಕ್‌ಗಳು ಡಿಕ್ಕಿಯಾಗಿ ಗಲಾಟೆಯಾಗಿದೆ. ಆ ಸಂದರ್ಭದಲ್ಲಿ ಶಾಹಿನ್ ಚಾಕುವಿನಲ್ಲಿ ಚಂದ್ರು ತೊಡೆಗೆ ಚುಚ್ಚಿದ್ದಾನೆ" ಎಂದು ತಿಳಿಸಿಸಿದ್ದಾರೆ.
ಇದನ್ನೂ ಓದಿ: ಗೌರಿಪಾಳ್ಯ ಚಂದ್ರು ಮರ್ಡರ್ ಕೇಸ್: ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೊಲೆ ಎಂದ ಸಿ.ಟಿ.ರವಿ!
ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 5 ರ ಮಧ್ಯರಾತ್ರಿ ನಡೆದ ಕೊಲೆ ನಡೆದಿತ್ತು. "ಆಕ್ಸಿಡೆಂಟ್ ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆ ಬಳಿಕ ಕೊಲೆ ನಡೆದಿದೆ. ಮೂವರು ಆರೋಪಿಗಳನ್ನ ಬಂಧಿಸಿದ್ದೇವೆ" ಎಂದು ಪೊಲೋಸರು ಕೂಡ ಮಾಹಿತಿ ನೀಡಿದ್ದಾರೆ. ಸೈಮನ್ ರಾಜ್ ಮತ್ತು ಚಂದ್ರು ಇಬ್ಬರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುಗುವಾಗ ಇವರ ಮತ್ತು ಶಾಹಿದ್ ಚಾಲನೆ ಮಾಡುತ್ತಿದ್ದ ಮತ್ತೊಂದು ಬೈಕುಗಳ ಪರಸ್ಪರ ತಗುಲಿದ ವಿಷಯವು ಗಲಾಟೆಗೆ ಕಾರಣವಾಗಿತ್ತು.