ರೆಮ್ಡಿಸ್‌ವೀರ್‌, ಆಕ್ಸಿಜನ್ ಅಕ್ರಮ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಸುಧಾಕರ್ ವಾರ್ನ್

Apr 26, 2021, 11:53 AM IST

ಬೆಂಗಳೂರು (ಏ. 26): ರಾಜಧಾನಿಯಲ್ಲಿ ಈಗ ಲಾಕ್‌ಡೌನ್ ಭಯ ಶುರುವಾಗಿದೆ. ತಮ್ಮ ತಮ್ಮ ಊರುಗಳಿಗೆ ಲಗೇಜ್ ಸಮೇತ ಜನ ಹೊರಟಿದ್ದಾರೆ. ರೈಲ್ವೇ ನಿಲ್ದಾಣಗಳಲ್ಲಿ, ಬಸ್‌ಸ್ಟ್ಯಾಂಡ್‌ಗಳಲ್ಲಿ ಜನ ಊರುಗಳಿಗೆ ಹೊರಟಿರುವ ದೃಶ್ಯ ಸಾಮಾನ್ಯವಾಗಿದೆ. 

ಬೀದರ್‌ನಲ್ಲಿ ರೆಮ್ಡಿಸಿವಿರ್‌ ಅಕ್ರಮ ಮಾರಾಟ ದಂಧೆಗಿಳಿದ ಆರೋಗ್ಯ ಅಧಿಕಾರಿಗಳು

ರೆಮ್ಡಿಸಿವಿರ್‌ ಕಾಳಸಂತೆಗಳಲ್ಲಿ ಸಿಗುತ್ತಿದೆ ಎಂಬ ಆರೋಪದ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. 'ರೆಮ್ಡಿಸ್‌ವಿರ್‌ನ ಯಾರಾದರೂ ಇಟ್ಟುಕೊಳ್ಳುವುದು, ಅಕ್ರಮ ಮಾರಾಟ ಮಾಡುವುದು ಕಂಡು ಬಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್, ರೆಮ್ಡಿಸ್‌ವೀರ್ ಕೊರತೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ' ಎಂದು ಭರವಸೆಯನ್ನೂ ನೀಡಿದ್ದಾರೆ.