ಇಂದೇ ಎರಡನೇ ಪ್ಯಾಕೇಜ್ ಘೋಷಿಸ್ತಾರಾ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ?

May 13, 2020, 12:27 PM IST

ಬೆಂಗಳೂರು(ಮೇ.13): ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಂಕಷ್ಟಕ್ಕೆ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯದ ಜನತೆಗೆ ಇಂದು ಅಥವಾ ನಾಳೆ ಎರಡನೇ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಯಿದೆ.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ಮುಖ್ಯಮಂತ್ರಿ ಬಿಎಸ್‌ವೈ 600ರಿಂದ 700 ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಆಟೋ  ಚಾಲಕರಿಗೆ, ಕ್ಷೌರಿಕರಿಗೆ, ಹೂ-ಹಣ್ಣು-ತರಕಾರಿ ಬೆಳೆಗಾರರು ಸೇರಿದಂತೆ ಹಲವು ಮಂದಿಗೆ ಪ್ಯಾಕೇಜ್ ಘೊಷಿಸಿದ್ದರು.

ಆರ್ಥಿಕ ಪ್ಯಾಕೇಜ್: ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸುದ್ದಿಗೋಷ್ಠಿ!

ಎರಡನೇ ಹಂತದ ಪ್ಯಾಕೇಜ್‌ನಲ್ಲಿ ಯಾರಿಗೆಲ್ಲಾ ಅನುಕೂಲವಾಗಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.