ಮುಸ್ಲಿಮರು ಹಲಾಲ್‌ ಕಟ್‌ ಮಾಡಿಕೊಳ್ಳಲಿ ಬಿಡಿ, ಯಾಕೆ ವಿರೋಧಿಸ್ತೀರಾ? ಸಿದ್ದು ಪ್ರಶ್ನೆ

Apr 3, 2022, 3:36 PM IST

ಬೆಂಗಳೂರು (ಏ. 03): ಹಲಾಲ್ ವಿವಾದಕ್ಕೆ (Halal Row) ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಹಲಾಲ್‌ನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರ್ತಿದ್ದಾರೆ. ಅದು ಮುಸ್ಲಿಮರು ನಡೆಸಿಕೊಂಡು ಬಂದಿರುವ ಪದ್ಧತಿ. ನೀವ್ಯಾಕೆ ಅದನ್ನ ವಿರೋಧಿಸುತ್ತೀರಿ..? ಎಂದು ಹಿಂದೂ ಸಂಘಟನೆಗಳನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯುಗಾದಿ ಹೊಸತೊಡಕು: ಹಲಾಲ್ ಬಾಯ್ಕಾಟ್ ಅಭಿಯಾನಕ್ಕೆ ಜನರ ರೆಸ್ಪಾನ್ಸ್ ಹೀಗಿದೆ

ಮನುಷ್ಯನಿಗೆ ಸಂಬಂಧವಿಲ್ಲದ ವಿಚಾರಗಳನ್ನು ಅನಗತ್ಯವಾಗಿ ತಂದು ಸಮಾಜದ ಶಾಂತಿ ಕದಡುತ್ತೀರಿ. ನಾವು ಹಬ್ಬಗಳಲ್ಲಿ ಮರಿಗಳನ್ನು ಕೊಯ್ಯುತ್ತೇವೆ. ನಾವೂ ಈ ಹಿಂದೆ ಹಲಾಲ್‌ಗಳನ್ನು ತಿಂದಿಲ್ವಾ...? ಅವರ ಪದ್ಧತಿ ಅವರು ಮಾಡಿಕೊಳ್ಳಲಿ ಬಿಡಿ' ಎಂದಿದ್ದಾರೆ.