ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..​! ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಮುಂದಿನ ನಡೆ ಏನು?

ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..​! ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಮುಂದಿನ ನಡೆ ಏನು?

Published : Aug 22, 2025, 02:36 PM IST

ಧರ್ಮಸ್ಥಳ ವಿರೋಧಿ ಗ್ಯಾಂಗ್​ನ ಲೀಡರ್​ ತಿಮರೋಡಿ ಮತ್ತು AI ವಿಡಿಯೋಗಳಿಂದ ಜನರನ್ನು ಹುಚ್ಚೆಬ್ಬಿಸಿದ ಅವನ ಶಿಷ್ಯನ ಕಥೆ. ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಯತ್ನಿಸಿದ ಇವರಿಬ್ಬರ ಬಣ್ಣ ಈಗ ಬಯಲಾಗಿದೆ. ಸುಜಾತಾ ಭಟ್​​ಳ ಷಡ್ಯಂತ್ರ ವಿಫಲವಾಗಿದೆ. ಇವರ ಮುಂದಿನ ನಡೆ ಏನು?

ಆತ ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಲೀಡರ್​.. ಧರ್ಮಸ್ಥಳಕ್ಕೇ ಜೆಸಿಬಿ ನುಗ್ಗಿಸುತ್ತೇನೆ ಅಂದವನು.. ಇವತ್ತು ಅವನದ್ದೇ ಹರಕಲು ಬಾಯಿಯಿಂದ ಪೊಲೀಸರ ಅತಿಥಿಯಾಗಿದ್ದಾನೆ.. ಇನ್ನೂ ಮತ್ತೊಬ್ಬ ಅವನ ಶಿಷ್ಯ.. AI ವಿಡಿಯೋಗಳಿಂದಲೇ ಏನೂ ಗೊತ್ತಿಲ್ಲದ ಜನರನ್ನ ಹುಚ್ಚೆಬ್ಬಿಸಿದ್ದ.. ಇವರಿಬ್ಬರೂ ಸೇರಿಕೊಂದು ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳೆಯಬಹುದೋ ಹಾಗೆಲ್ಲಾ ಬಳೆದುಬಿಟ್ಟಿದ್ರು.. ಆದ್ರಿವತ್ತು ಅದೇ ಗ್ಯಾಂಗ್​ನ ಲೀಡರ್​​ ಅರೆಸ್ಟ್​​ ಆದ್ರೆ ಮತ್ತೊಬ್ಬ ಎಸ್ಕೆಪ್​ ಆಗಿ ಕೋರ್ಟ್​ ಮೊರೆ ಹೋಗಿದ್ದ.. ಸದ್ಯ ಜಾಮೀನು ಪಡೆದುಕೊಂಡಿದ್ದಾನೆ.. ಅಷ್ಟಕ್ಕೂ ಅವರಿಬ್ಬರ ಮೇಲೆ ಪೊಲೀಸರ ಕಣ್ಣು ಬಿದ್ದಿದ್ದೇಕೆ..? ಈ ಹರಕಲು ಬಾಯಿಯ ತಿಮರೋಡಿ ಇವತ್ತು ಮಾಡಿದ ಹೈಡ್ರಾಮ ಹೇಗಿತ್ತು.? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್​​

ಒಂದೆಡೆ ಬುರುಡೆ ಗ್ಯಾಂಗ್​ಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದ್ರೆ, ಮತ್ತೊಂದೆಡೆ ಧರ್ಮಸ್ಥಳದ ಪರ ರಾಜ್ಯವ್ಯಾಪಿ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನೂ ತಿಮರೋಡಿ ಮತ್ತು ಸಮೀರ್​​ ಕಥೆ ಇದಾದ್ರೆ ಇನ್ನೂ ಮ್ಯಾಜಿಕ್​ ಅಜ್ಜಿ ಸುಜಾತಾ ಭಟ್​​ ಕಥೆ ಇನ್ನೂ ಬಾಕಿ​ ಇದೆ.. ಈ ಬಗ್ಗೆ ಮತ್ತಷ್ಟು ರೋಚಕ ಸಂಗತಿಗಳನ್ನ ನಮ್ಮ ಟೀಂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರತಂದಿದೆ.

ನನ್ನ ಮಗಳ ಅಸ್ತಿಪಂಜರ ಹುಡುಕಿಕೊಡಿ ಅಂತ ಬಂದಿದ್ದ ಸುಜಾತಾ ಭಟ್​​​ ಅಸಲಿಯತ್ತನ್ನ ನಾವೇ ಬಯಲು ಮಾಡಿದ್ದೇವೆ.. ಯಾರದ್ದೋ ಫೋಟೋ ತಂದು ನನ್ನ ಮಗಳು ಅಂದಿದ್ದ ಸುಜಾತಾ ಭಟ್​​ಳ ಪ್ರತಿಯೊಂದು ಷಡ್ಯಂತ್ರ ಕೂಡ ಈಗ ವಿಫಲವಾಗಿದೆ.. ಆದ್ರೆ ಈಗ ಇಲ್ಲದೇ ಇರೋ ಅನನ್ಯ ಭಟ್​​ ಕ್ಯಾರೆಕ್ಟರ್​​ ಹುಟ್ಟಿಕೊಂಡಿದ್ದು ಎಲ್ಲಿ ಮತ್ತು ಹೇಗೆ ಅನ್ನೋ ವಿಷಯ ಕೂಡ ಬಯಲಾಗಿದೆ.. ಐನಾತಿ ಅಜ್ಜಿ ಕಥೆ ಹೇಳಿದ್ರೆ.. ತಿಮರೋಡಿ ಚಿತ್ರಕಥೆ ಬರೆದಿದ್ದ ಇನ್ನೂ AI ಸಮೀರ ಕಥೆಗೆ ಗ್ರಾಫಿಕ್ಸ್​​ ಟಚ್​ ಕೊಟ್ಟಿದ್ದ.. ಅಷ್ಟೇ ಅಲ್ಲ.. ಸಾವಿರಾರು ಹೆಣಗಳನ್ನ ಹೂತಿದ್ದೇನೆ ಅಂತ ಬಂದಿರೋ ಅನಾಮಿಕನ ಬಣ್ಣವೂ ಬಯಲಾಗಿದೆ.

ಬುರುಡೆ ಬಯಲಾಟದಲ್ಲಿ ಪಾತ್ರಧಾರಿಗಳ ಅಸಲಿಯತ್ತು ಈಗ ಹೊರಬರುತ್ತಿದೆ. ಈ ಕಪಟ ನಾಟಕಕ್ಕೆ ತೆರೆ ಬೀಳುವ ಎಲ್ಲ ಲಕ್ಷಣಗಳು ಕಾಣ್ತಿವೆ.. ಟೆಂಪಲ್​ಟೌನ್​ ಮೇಲೆ ಕವಿದಿದ್ದ ಅಪಪ್ರಚಾರ, ಗುಮಾನಿಗಳ ಕಾರ್ಮೋಡ ಸರಿದು ಸತ್ಯದರ್ಶನವಾಗಲಿ.. ಭಕ್ತರ ಆತಂಕ, ದುಗುಡಗಳೆಲ್ಲ ದೂರವಾಗಲಿ ಈ ಎಲ್ಲದರ ಸಂಪೂರ್ಣ ಡಿಟೇಲ್ ವೀಡಿಯೋದಲ್ಲಿದೆ ನೋಡಿ.

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more