ತುಂಗಭಧ್ರಾ ಜಲಾಶಯ ಗೇಟ್ ಮುರಿಯಲು ಕಾರಣವೇನು? ಹೊಸ ಗೇಟ್ ಜೋಡಣೆ ಯಾವಾಗ?

Aug 12, 2024, 11:49 AM IST

ಬೆಂಗಳೂರು (ಆ.12): ಹೊಸಪೇಟೆಯಲ್ಲಿರುವ ತುಂಗಭದ್ರ ಜಲಾಶಯದ ಕ್ರಸ್ಟ್‌ ಗೇಟ್​​ 19ರ ಚೈನ್ ಲಿಂಕ್​ ಕಟ್ಟಾಗಿದೆ. ಇದರ ಪರಿಣಾಮ ಗೇಟ್​ ಮುರಿದು ನದಿಗೆ ದೊಡ್ಡ  ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಜಲಾಶಯ ಭರ್ತಿಯಾದ ಖುಷಿಯಲ್ಲಿದ್ದ ಜನತೆಗೆ ಇದು ದೊಡ್ಡ ಶಾಕಾಗಿದೆ. ಹಾಗಿದ್ದರೆ ಗೇಟ್​​ ಸರಿ ಪಡಿಸುವಷ್ಟರಲ್ಲಿ ಎಷ್ಟು ಪ್ರಮಾಣದ ನೀರು ಹರಿದು ಹೋಗಲಿದೆ? ಇದರಿಂದ ಏನೆಲ್ಲ ತೊಂದರೆಯಾಗಲಿದೆ ಅನ್ನೋದನ್ನು ಇಲ್ಲಿ ನೋಡೋಣ. 

ಗೇಟ್​ ಮುರಿದ ಸುದ್ದಿ ತಿಳಿದು ಡಿಕೆ ಶಿವಕುಮಾರ್​ ಇಂದು ತುಂಗಭದ್ರ ಜಲಾಶಯಕ್ಕೆ ಭೇಟಿ ನೀಡಿದ್ದರು. ಭೇಟಿ ನಂತರ ಪರಿಸ್ಥಿತಿಯನ್ನು ಪರಿಶೀಲಿಸಿದ ನೀರು ಹರಿದು ಹೋಗುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇನ್ನು ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಗೇಟ್​​ ಮುರಿದು ನೀರು ಹರಿದು ಹೊರಟಿದೆಯಾ? ಎಂಬ ಅನುಮಾನಗಳು ಜನರಿಗೆ ಕಾಡುತ್ತಿವೆ. ಮಧ್ಯ ಕರ್ನಾಟಕದ ಜೀವನದಿ ಆಗಿರವ ತುಂಗಭದ್ರ ಜಲಾಶಯ ಲಕ್ಷಾಂತರ ರೈತರ ಬದುಕಿನ ಜೀವನಾಡಿ ಆಗಿದೆ. ಮೂರು ರಾಜ್ಯಗಳ ರೈತರಿಗೆ ಅವಶ್ಯವಾಗಿರುವಂತಹದ್ದು. ಇಷ್ಟೊಂದು ಮಹತ್ವದ ಜಲಾಶಯ ನಿರ್ವಹಣೆ ನಿರ್ಲಕ್ಷಿಸಿದ್ದು ಏಕೆ ಎಂದು ರೈತರು ಆಕ್ರೋಶಗೊಂಡಿದ್ದಾರೆ. 

ತುಂಗಭದ್ರಾ ಜಲಾಶಯ ಚೈನ್‌ಲಿಂಕ್ ದುರಸ್ತಿಗೆ ಇನ್ನೂ 4-5 ದಿನಗಳು ಬೇಕು; ಡಿಸಿಎಂ ಡಿ.ಕೆ. ಶಿವಕುಮಾರ

ತುಂಗಭದ್ರ ಜಲಾಶಯದ ಗೇಟ್​ ಮುರಿದ ಪರಿಣಾಮ ಹೆಚ್ಚಿನ ಪ್ರಮಾಣದ ನೀರು ಹರಿದು ಹೊರಟಿದೆ. ಹೀಗಾಗಿ ನದಿ ಪಕ್ಕದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಸರ್ಕಾರ ಆದಷ್ಟು ಬೇಗ ಹೊಸ ಗೇಟ್​ ಅಳವಡಿಸಲಿ ಎಂದು ರೈತರು ಕೇಳಿಕೊಳ್ಳುತ್ತಿದ್ದಾರೆ. ಇದೀಗ ಜಲಾಶಯದ ಡಿಸೈನ್ ಅನ್ನು ಗುತ್ತಿಗೆದಾರರಿಗೆ ನೀಡಲಾಗಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ದುರಸ್ತಿ ಕಾರ್ಯ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಾರ್ ಮಾಹಿತಿ ನೀಡಿದ್ದಾರೆ..