Feb 12, 2022, 5:39 PM IST
ಉಡುಪಿ (ಫೆ. 11): ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಹಿಜಾಬ್‌ಗೆ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಸಿಎಫ್‌ಐ (CFI) ಸಂಘಟನೆಯ ಇತರ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದು, ವಿವಾದಿತ ಜೆಎನ್‌ಯುವರೆಗೆ ಸಂಪರ್ಕ ಹೊಂದಿರುವುದು ಅವರ ಟ್ವೀಟರ್ ಖಾತೆಯಿಂದ ಬಹಿರಂಗವಾಗಿದೆ. ಜೆಎನ್‌ಯುನಲ್ಲಿರುವ ಸಿಎಫ್‌ಐ ತಂಡವೇ ಈ ಹಿಜಾಬ್ ಹೈಡ್ರಾಮಾವನ್ನು ನಿರ್ದೇಶಿಸುತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಆರಂಭವಾಗಿದೆ.
Hijab Row: ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯ, ಸಾಫ್ಟ್ ಹಿಂದುತ್ವದ ಮೊಎ ಹೋದ್ರಾ ಡಿಕೆಶಿ..?
ಹಿಜಾಬ್ ಹೋರಾಟಗಾರ್ತಿಯರು ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಬಾಬ್ರಿ ಮಸೀದಿ-ಶ್ರೀರಾಮ ಮಂದಿರದ ವಿಷಯದಲ್ಲಿ ಸುಪ್ರೀಂ ಕೋರ್ಟಿನ ತೀರ್ಪು, ಮಸೀದಿಗಳಲ್ಲಿ ಆಜಾನ್ ನಿಷೇಧದ ವಿರುದ್ಧ ಹೋರಾಟದ ಬಗ್ಗೆ ನಡೆದ ಅಭಿಯಾನದಲ್ಲೂ ಭಾಗಿಯಾಗಿದ್ದರು. ಇನ್ನು ದೆಹಲಿ ದಂಗೆಯ ಆರೋಪಿ ರವೂಫ್ ಶರೀಫ್‌ನ ಪರ ಹೋರಾಟಗಳಲ್ಲಿಯೂ ಈ ಹಿಜಾಬ್ ವಿದ್ಯಾರ್ಥಿನಿಯರು ಟ್ವೀಟ್-ರೀಟ್ವೀಟ್‌ಗಳ ಮೂಲಕ ಭಾಗವಹಿಸಿದ್ದು ಕೂಡ ಬಹಿರಂಗವಾಗಿದೆ.