ರಾಘವೇಂದ್ರ- ವಿಜಯೇಂದ್ರರಿಂದ 30 ಸಾವಿರ ದಿನಸಿ ಕಿಟ್, ಆಂಬ್ಯುಲೆನ್ಸ್

May 30, 2021, 3:11 PM IST

ಬೆಂಗಳೂರು (ಮೇ.30):  ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಸಿಎಂ ಬಿಎಸ್ ಯಡಿಯೂರಪ್ಪ ಪುತ್ರರು ಮುಂದಾಗಿದ್ದಾರೆ.  ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ಶಿವಮೊಗ್ಗದ 1500 ಪೌರಕಾರ್ಮಿಕರಿಗೆ ಪಡಿತರ ವಿತರಿಸಿದರು. ಪ್ರೇರಣಾ ಎಜುಕೇಶನಲ್ ಟ್ರಸ್ಟ್‌ನಿಂದ ಪಡಿತರ ವಿತರಣೆ ಮಾಡಲಾಯಿತು.

ಜೂನ್ 7 ರವರೆಗೆ ಯಾವುದೇ ಬದಲಾವಣೆ ಇಲ್ಲ, ಸಿಎಂ ಸಭೆ ಬಳಿಕ ನಿರ್ಧಾರ: ಬೊಮ್ಮಾಯಿ 

ಸಿಎಂ ಪುತ್ರ ಸಂಸದ ಬಿ ವೈ ರಾಘವೇಂದ್ರ 30 ಸಾವಿರ ದಿನಸಿ ಕಿಟ್ ವಿತರಣೆ ಮಾಡಿದರೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಉಚಿತ ಆಂಬ್ಯುಲೆನ್ಸ್, ಅಕ್ಸಿಜನ್ ಕಾನ್ಸನ್ಟೇಟರ್ ಗಳನ್ನು ನೀಡಿದರು. ವಿವಿಧ ವರ್ಗಗಳಲ್ಲಿ ಕೆಲಸ ಮಾಡುತ್ತಿರುವರಿಗೆ ಸುಮಾರು 30 ಸಾವಿರ ದಿನಸಿ ಕಿಟ್ ಗಳನ್ನು ಸ್ವಂತ ಹಣದಲ್ಲಿ ವಿತರಿಸಿದರು.

ಸೇವಾ ಭಾರತಿ ಕರ್ನಾಟಕ ಪ್ರೇರಣಾ ಎಜುಕೇಷನಲ್ ಟ್ರಸ್ಟ್  ಕೊರೋನಾ ವಾರಿಯರ್ಸ್ ನೆರವಿಗೆ ನಿಂತಿತು. ಪೌರ ಕಾರ್ಮಿಕರು,  ಅಂಗನವಾಡಿ ಶಿಕ್ಷಕರು, ಸಹಾಯಕರಿಗೆ, ಆಶಾ ಕಾರ್ಯಕರ್ತೆಯರು,  ಅಡುಗೆ ಭಟ್ಟರು, ಅರ್ಚಕರು,  ಮಾಧ್ಯಮದವರು, ಪತ್ರಿಕಾ ವಿತರಕರು, ಫೋಟೋ ಗ್ರಾಫರ್,  ಕ್ಷೌರಿಕರು, ಬಸ್ ಎಜೆಂಟ್, ಡ್ರೈವರ್ ಗಳಿಗೆ ಡಿಎಆರ್ ಗ್ರೌಂಡ್ ನಲ್ಲಿ ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್ ಗಳಿಗೆ, ಮೆಡಿಕಲ್ ಕಾಲೇಜಿನ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಿಟ್ ಹಂಚಲಾಯಿತು. ‌