ಬಿಎಸ್‌ವೈರನ್ನು ಕೆಳಗಿಳಿಸಿದ್ರೆ, ಪರಿಣಾಮ ಎದುರಿಸಿ: ವೀರಶೈವ ಯುವ ಬ್ರಿಗೇಡ್ ಎಚ್ಚರಿಕೆ

Jul 21, 2021, 11:27 AM IST

ಬೆಂಗಳೂರು (ಜು. 21): ಸಿಎಂ ಬದಲಾವಣೆ ವಿಚಾರವಾಗಿ ವೀರಶೈವ ಯುವ ಬ್ರಿಗೇಡ್ ಎಚ್ಚರಿಕೆ ನೀಡಿದೆ. 'ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ರೆ ನಾವು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಮೂಲ ಕಾರಣ. ಯಡಿಯೂರಪ್ಪಗೆ ಪೂರ್ಣ ಕೆಲಸ ಮಾಡಲು ಅವಕಾಶ ಮಾಡಿ ಕೊಡಿ. ಸಿಎಂ ಬದಲಾದ್ರೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ'  ಎಂದು ವೀರಶೈವ ಲಿಂಗಾಯತ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಮಹೇಶ್ ಎಚ್ಚರಿಕೆ ನೀಡಿದ್ದಾರೆ.