ವರ್ತೂರು ಪ್ರಕಾಶ್‌ಗೆ ಮತ್ತೊಂದು ಮಹಾ ಸಂಕಷ್ಟ: ಸ್ಫೋಟಕ ಸತ್ಯ ಬಾಯಿಬಿಟ್ಟ ಶ್ವೇತಾ ಗೌಡ

ವರ್ತೂರು ಪ್ರಕಾಶ್‌ಗೆ ಮತ್ತೊಂದು ಮಹಾ ಸಂಕಷ್ಟ: ಸ್ಫೋಟಕ ಸತ್ಯ ಬಾಯಿಬಿಟ್ಟ ಶ್ವೇತಾ ಗೌಡ

Published : Dec 25, 2024, 07:44 PM IST

ಚಿನ್ನದ ಹಗರಣದಲ್ಲಿ ಬಂಧಿತರಾಗಿರುವ ಶ್ವೇತಾ ಗೌಡ, ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ರಾಜಕೀಯ ಎದುರಾಳಿಯನ್ನು ಮಣಿಸಲು ತನ್ನನ್ನು ಬಳಸಿಕೊಂಡರು ಎಂದು ಆರೋಪಿಸಿದ್ದಾರೆ. ಕೋಲಾರದ ಬಿಜೆಪಿ ನಾಯಕನ ಮೇಲೆ ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದಾಗಿ ಶ್ವೇತಾ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಲವು ಚಿನ್ನಾಭರಣ ಮಳಿಗೆಗಳಿಗೆ ಚಿನ್ನವನ್ನು ಪಡೆದು ಹಣ ಕೊಡದೇ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿರುವ ಶ್ವೇತಾ ಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಕುರಿತ ಸಂಬಂಧಿಸಿದಂತೆ ಭಾರೀ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ತಮ್ಮ ರಾಜಕೀಯ ಎದುರಾಳಿಯನ್ನು ಮಣಿಸುವುದಕ್ಕೆ ತನ್ನ ಫೇಸ್‌ಬುಕ್ ಗೆಳತಿ ಶ್ವೇತಾ ಗೌಡಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವರ್ತೂರು ಪ್ರಕಾಶ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿನ್ನದ ಹಗರಣದಲ್ಲಿ ಸಿಲುಕಿಕಂಡಿರುವ ಶ್ವೇತಾ ಗೌಡ ನನಗೆ ಪರಿಚಯವೇ ಇಲ್ಲ ಎಂದು ಹೇಳುತ್ತಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಡಬಲ್ ಗೇಮ್ ಆಡುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ವರ್ತೂರು ಪ್ರಕಾಶ್ ಅವರ ಇನ್ನೊಂದು ಬಣ್ಣವನ್ನು ಶ್ವೇತಾ ಗೌಡ ಬಯಲು ಮಾಡಿದ್ದಾರೆ.

ಇದನ್ನೂ ಓದಿ: ದಾಸನ ಗೆಳತಿ ಪವಿತ್ರಾ ಗೌಡ ಜೊತೆಗೆ ಲಿಂಕ್ ಹೊಂದಿದ್ದ ವರ್ತೂರು ಪ್ರಕಾಶ್‌ನ ಚಿನ್ನದ ರಾಣಿ ಶ್ವೇತಾ ಗೌಡ!

ಕೋಲಾರದಲ್ಲಿ ರಾಜಕೀಯ ಎದುರಾಳಿ ಆಗಿದ್ದ ಬಿಜೆಪಿ ನಾಯಕನ ಬಳಿ ಸಾಕಷ್ಟು ಹಣವಿದ್ದು, ಆತನ ಮೇಲೆ ಗೋಲ್ಡ್ ಇನ್ವೆಸ್ಟ್ ಮಾಡು ಎಂದು ವರ್ತೂರು ಪ್ರಕಾಶ್ ಶ್ವೇತಾಗೌಡಗೆ ಹೇಳಿದ್ದರು. ಈ ಮೂಲಕ ಶ್ವೇತಾ ಗೌಡ ಕೋಲಾರದ ನಾಯಕನನ್ನು ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ. 

2023ರ ವಿಧಾನ ಸಭಾ ಚುನಾವಣೆಯಲ್ಲಿ ವರ್ತೂರು ಪ್ರಕಾಶ್‌ಗೆ ಯಾಕೆ ಟಿಕೆಟ್ ಕೊಡುತ್ತೀರಿ ಎಂದು ಕೋಲಾರದ ಬಿಜೆಪಿ ನಾಯಕ ಓಂ ಚಲಪತಿ ಹೈಕಮಾಂಡ್‌ಗೆ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜಕೀಯ ವಿರೋಧಿಯನ್ನು ಹಣಿಯಲು ಶ್ವೇತಾ ಗೌಡಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲಿಯೇ ಶ್ವೇತಾ ಗೌಡ ಬಿಜೆಪಿ ಮುಖಂಡ ಓಂ ಚಲಪತಿ ಅವರನ್ನು ಭೇಟಿ ಮಾಡಿದ್ದಳು. ಆಗ ಓಂ ಚಲಪತಿ ಅವರ ಹೆಸರನ್ನು ಮೈಸೂರ್ ಪಾಕ್ ಎಂದೂ ಸೇವ್ ಮಾಡಿಕೊಂಡಿದ್ದರು.

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!