Nov 25, 2021, 6:03 PM IST
ತುಮಕೂರು(ನ.25) ಇಪ್ಪತ್ತು ವರ್ಷ ಬತ್ತಿ ಹೋಗಿದ್ದ ನದಿಗೆ(River) ಮತ್ತೆ ಜೀವ. ಜಯ ಮಂಗಲಿ, ಗರುಡಾಚಲ... ಒಟ್ಟೊಟ್ಟಿಗೆ ಮೂರು ನದಿಗಳ ಪುನರ್ಜನ್ಮ. ತುಂಬಿ ಹರಿಯುತ್ತಿರೋ ನದಿ ಕಂಡು ರೈತರ (Farmers) ಹರ್ಷೋದ್ಗಾರ ತುಮಕೂರಿನ ನದಿಯ ಜಲ ವೈಭವ ಹೇಗಿದೆ ಗೊತ್ತಾ?
ಹೌದು ಕರುನಾಡಿನಲ್ಲಿ (Karnataka) ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಹಾಮಳೆಯಿಂದ (karnataka Rians) ರಾಜ್ಯದ ಬಹುತೇಕ ಕೆರೆ-ಕಟ್ಟೆ, ನದಿ- ಕಾಲುವೆಗಳು ತುಂಬಿ ಹರಿಯುತ್ತಿವೆ. ಈ ನಡುವೆ ತುಮಕೂರಿನ (Tumakuru) ಕೊರಟಗೆರೆ ಮಧುಗಿರಿ ಭಾಗದಲ್ಲಿ ಹರಿಯುತ್ತಿರೋ ಜಯಮಂಗಲಿ ನದಿ ಈಗ ತುಂಬಿ ಹರಿಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಅನ್ನೋರು ಈ ನದಿ ಕಳೆದ ಅನೇಕ ವರ್ಷಗಳಿಂದ ಒಂದು ಬಾರಿಯೂ ತುಂಬಿ ಹರಿದಿಲ್ಲ, ನೀರು ಕಂಡಿಲ್ಲ.ಈಗ ಇಪ್ಪತ್ತು ವರ್ಷಗಳ ಬಳಿಕ ಈ ನದಿ ತುಂಬಿ ತುಳುಕಾಡುತ್ತಿದೆ. ಇದು ಇಲ್ಲಿನ ಸುತ್ತಮುತ್ತಲಿನ ರೈತರ ಮುಖದಲ್ಲಿ ಸಂತಸ ಮೂಡಿಸಿದೆ.
ಇಷ್ಟೇ ಅಲ್ಲದೇ ಈ ಬಾರಿ ಸುರಿದ ಅಕಾಲಿಕ ಮಳೆಗೆ ಇನ್ನೂ ಎರಡು ನದಿಗಳು ಜೀವ ಪಡೆದಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.