Jul 31, 2020, 9:54 AM IST
ಬೆಂಗಳೂರು(ಜು.31): ಕೊರೋನಾ ಅಟ್ಟಹಾಸದ ನಡುವೆ ಭಾರತ ಮೂರನೇ ಹಂತದ ಅನ್‌ಲಾಕ್‌ಗೆ ಸಜ್ಜಾಗಿದೆ. ಅನ್‌ಲಾಕ್ 3.Oನಲ್ಲಿ ಆಗಸ್ಟ್ 01ರಿಂದ ಜಾರಿಗೆ ಬರಲಿದ್ದು, ಬಾರ್&ರೆಸ್ಟೋರೆಂಟ್ ಗ್ರಾಹಕರಿಗೆ ಮತ್ತೆ ನಿರಾಸೆ ಎದುರಾಗಿದೆ.
ಮೂರನೇ ಹಂತದ ಅನ್‌ಲಾಕ್‌ನಲ್ಲಿ ಹಲವು ಸೇವೆಗಳು ಓಪನ್ ಆಗುತ್ತಿವೆಯಾದರೂ ಬಾರ್& ರೆಸ್ಟೋರೆಂಟ್‌ಗಳು ಬಾಗಿಲು ತೆರೆಯಲು ಮತ್ತಷ್ಟು ದಿನಗಳು ಕಾಯಲೇಬೇಕಾಗಿದೆ. ಆದರೆ ಲಾಕ್‌ಡೌನ್‌ನಿಂದ ಬಾಗಿಲು ಮುಚ್ಚಿದ್ದ ಜಿಮ್ ಹಾಗೂ ಯೋಗ ಕ್ಲಾಸ್‌ಗಳು ಆಗಸ್ಟ್ 05ರಿಂದ ಆರಂಭವಾಗಲಿವೆ.
ಕಂಟೈನ್ಮೆಂಟ್ ಪ್ರದೇಶದವರು ಕೆಲ್ಸಕ್ಕೆ ಹೋಗೋ ಹಾಗಿಲ್ಲ: BBMP
ಇಂದಿಗೆ(ಜುಲೈ 31) ರಾತ್ರಿ ಕರ್ಫ್ಯೂ ಕೂಡಾ ಮುಕ್ತಾಯವಾಗಲಿದೆ. ಇನ್ನು ರಾಜ್ಯದಲ್ಲಿ ಜಾರಿಯಲ್ಲಿದ್ದ ಸಂಡೇ ಕರ್ಫ್ಯೂ ಕೂಡಾ ರದ್ದಾಗಲಿದೆ. ಇದೇ ವೇಳೆ ಸರ್ಕಾರಿ ನೌಕರರಿಗೆ ಶನಿವಾರ ನೀಡಲಾಗಿದ್ದ ರಜೆಯನ್ನು ರದ್ದಯ ಮಾಡಲಾಗಿದೆ. ಮೂರನೇ ಅನ್‌ಲಾಕ್‌ನಲ್ಲಿ ಏನಿರತ್ತೆ? ಏನಿರಲ್ಲ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.