ಕೋಡಿಹಳ್ಳಿ ಮಾತು ಕೇಳಿ ಕೆಟ್ಟರಾ ಸಾರಿಗೆ ನೌಕರರು..?

Apr 11, 2021, 9:33 AM IST

ಬೆಂಗಳೂರು (ಏ. 11): ಸಾರಿಗೆ ನೌಕರರ ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ನೂರಾರು ನೌಕರರ ವಜಾ, ವರ್ಗಾವಣೆ ಜೊತೆ 52 ವರ್ಷ ಮೀರಿದ ನೌಕರರು ಏ. 12 ರೊಳಗೆ ದೇಹದಾರ್ಢ್ಯ ಪ್ರಮಾಣ ಪತ್ರ ಸಲ್ಲಿಸುವಂತೆ ಎಚ್ಚರಿಕೆ ನೀಡಿದೆ. ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. 

ರಂಗೇರಿದ ಮಸ್ಕಿ ಬೈ ಎಲೆಕ್ಷನ್ ಕಾವು: ವಿಜಯೇಂದ್ರ ವಿಶ್ವಾಸದ ಮಾತು!

ಕೋಡಿಹಳ್ಳಿ, ಸಾರಿಗೆ ನೌಕರರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅವರ ಮಾತನ್ನು ಕೇಳಿ ನೌಕರರು ಮುಷ್ಕರ ಮುಂದುವರೆಸಿ, ಈಗ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಕೋಡಿಹಳ್ಳಿ ಮಾಡಿದ ತಪ್ಪೇನು..?