ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ (Santosh Suicide Case) ಸಂಬಂಧಿಸಿದಂತೆ, ಸಚಿವ ಈಶ್ವರಪ್ಪ (KS Eshwarappa) ವಿರುದ್ಧ ಉಡುಪಿ (Udupi) ನಗರ ಠಾಣೆಯಲ್ಲಿ FIR ದಾಖಲಾಗಿದೆ. ಈಶ್ವರಪ್ಪ ಆಪ್ತರಾದ ಬಸವರಾಜ್ ಹಾಗೂ ರಮೇಶ್ ವಿರುದ್ಧವೂ FIR ದಾಖಲಾಗಿದೆ.
ಬೆಂಗಳೂರು (ಏ. 13): ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ (Santosh Suicide Case) ಸಂಬಂಧಿಸಿದಂತೆ, ಸಚಿವ ಈಶ್ವರಪ್ಪ (KS Eshwarappa) ವಿರುದ್ಧ ಉಡುಪಿ (Udupi) ನಗರ ಠಾಣೆಯಲ್ಲಿ FIR ದಾಖಲಾಗಿದೆ. ಈಶ್ವರಪ್ಪ ಆಪ್ತರಾದ ಬಸವರಾಜ್ ಹಾಗೂ ರಮೇಶ್ ವಿರುದ್ಧವೂ FIR ದಾಖಲಾಗಿದೆ.
ರಸ್ತೆ ಕಾಮಗಾರಿ ಹಣ ಬಿಡುಗಡೆ ಆಗಿಲ್ಲದ್ದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೆಸರನ್ನು ಬರೆದಿಟ್ಟು ಬೆಳಗಾವಿ (Belagavi) ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರು ಈಶ್ವರಪ್ಪ ಪರ ನಿಂತಿದ್ದು, ಸಂತೋಷ್ ಆತ್ಮಹತ್ಯೆ ಏಕೆ ಮಾಡಿಕೊಂಡರು ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಈಗಾಗಲೇ ಈಶ್ವರಪ್ಪ ಅವರು ನ್ಯಾಯಾಲಯದಲ್ಲಿ ಮಾನನಷ್ಟಮೊಕದ್ದಮೆ ಹಾಕಿದ್ದಾರೆ.