ಮಂಡ್ಯ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರಿಂದ ಬೈಕ್ ರ್ಯಾಲಿ

Jul 25, 2022, 1:52 PM IST

ಮಂಡ್ಯ (ಜು. 25):  ಕೃಷ್ಣರಾಜಸಾಗರ ಅಣೆಕಟ್ಟು (KRS) ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟು ಸುರಕ್ಷತೆಗೆ ಅಪಾಯವಿರುವ ಕುರಿತು ಅಧ್ಯಯನ ನಡೆಸಲು ಜು.25 ರಿಂದ 31ರವರೆಗೆ ಪ್ರಾಯೋಗಿಕ ಸ್ಫೋಟ (Trial Blasts) ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಾರ್ಖಂಡ್‌ ರಾಜ್ಯದ ಧನಬಾದ್‌ನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರ ಪ್ರಾಯೋಗಿಕ ಸ್ಫೋಟ ನಡೆಸಲಿದ್ದು, ಗಣಿಗಾರಿಕೆಯಿಂದ ಅಣೆಕಟ್ಟೆಸುರಕ್ಷತೆ ಬಗ್ಗೆ ಅಧ್ಯಯನ ನಡೆಸುವುದರೊಂದಿಗೆ ಕೆಆರ್‌ಎಸ್‌ ಸುತ್ತ ಗಣಿಗಾರಿಕೆ ನಿಷೇಧಿಸುವ ಸಂಬಂಧ ಸುರಕ್ಷಿತ ವಲಯ ಗುರುತಿಸಲಿದೆ. ಟ್ರಯಲ್ ಬ್ಲ್ಯಾಸ್ಟ್ ಖಂಡಿಸಿ ರೈತ ಸಂಘಟನೆಗಳು ಬೈಕ್ ರ್ಯಾಲಿ ನಡೆಸಿವೆ. ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ.