May 5, 2020, 2:21 PM IST
ಬೆಂಗಳೂರು(ಮೇ.05): ಹೊಂಗಸಂದ್ರ ಪೊಲೀಸ್ ಪೇದೆಯ ಪಾಲಿಗೂ ಕೊರೋನಾ ವೈರಸ್ ಕಂಠಕವಾಗಿ ಪರಿಣಮಿಸಿತಾ ಎನ್ನುವ ಅನುಮಾನ ಶುರುವಾಗಿದೆ. ರೋಗಿ ನಂಬರ್ 650 ಒಡಾಟದ ಹಿನ್ನಲೆಯೇ ಭಯಾನಕವಾಗಿದ್ದು, ಸಾಕಷ್ಟು ಕಡೆ ಸೋಂಕು ಹರಡಿರಬಹುದೇ ಎನ್ನುವ ಅನುಮಾನ ಆರಂಭವಾಗಿದೆ.
ಈ ಪೊಲೀಸ್ ಪೇದೆಯ ಟ್ರಾವೆಲ್ ಹಿಸ್ಟರಿ ನೋಡಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಈ ಕೊರೋನಾ ಸೋಂಕಿತ ಪೊಲೀಸ್ ಪೇದೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಜನರನ್ನು ಈಗಾಗಲೇ ಪತ್ತೆಹಚ್ಚಲಾಗಿದೆ.
ಮಾಸ್ಕ್ ಧರಿಸದ ಬೈಕ್ ಸವಾರಿಗೆ ಲಾಠಿ ಏಟುಕೊಟ್ಟ ರಾಯಚೂರು SP ವೇದಮೂರ್ತಿ
ಇನ್ನು ಎರಡನೇ ಹಂತದ ಸಂಪರ್ಕದಲ್ಲಿ 50ಕ್ಕೂ ಅಧಿಕ ಮಂದಿಯಿದ್ದರು ಎನ್ನುವುದು ಸಾಕಷ್ಟು ಕಳವಳವನ್ನುಂಟು ಮಾಡಿದೆ. ಪೇದೆಯ ಕುಟುಂಬದಲ್ಲಿ 12 ಜನರಿದ್ದಾರೆ. ಈ ಪೇದೆಯ ಅಣ್ಣ ಮತ್ತು ಅತ್ಯಗೆ ಇಬ್ಬರು ವೈದ್ಯರಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.