ಕೃಷಿ ಮಸೂದೆ ಖಂಡಿಸಿ ಸರ್ಕಾರದ ವಿರುದ್ಧ ಅನ್ನದಾತರ ಸಮರ; ಬೀದಿಗಿಳಿದಿದ್ದಾರೆ ರೈತರು

Sep 21, 2020, 6:07 PM IST

ಬೆಂಗಳೂರು (ಸೆ. 21): ಪ್ರತಿಪಕ್ಷಗಳ ತೀವ್ರ ವಿರೋಧ, ಕೋಲಾಹಲದ ನಡುವೆಯೇ ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಇದನ್ನು ಖಂಡಿಸಿ  ರೈತ ಸಂಘಟನೆಗಳು, ಕಾರ್ಮಿಕ ಸಂಘಡನೆಗಳು ಬೀದಿಗಿಳಿದಿವೆ.  ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರ್ಯಾಲಿ ನಡೆಯುತ್ತಿದೆ. ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ಇನ್ನಷ್ಟು ಸಂಕಷ್ಟ ಸೃಷ್ಟಿಯಾಗುತ್ತದೆ ಎಂಬುದು ಇವರ ಆತಂಕ. 

ವಿಧಾನಸೌಧದಲ್ಲಿ ಬಿಜೆಪಿ ಶಾಸಕ-ಸಚಿವರ ಗಲಾಟೆ: ಬುದ್ಧಿವಾದ ಹೇಳಿದ ಸಿದ್ದರಾಮಯ್ಯ

'ಕಾಯ್ದೆಯನ್ನು ಜಾರಿ ಮಾಡುವ ಮೂಲಕ ರೈತರಿಗೆ ವಿಷ ಹಾಕುವ ಕೆಲಸ ನಡೆಯುತ್ತಿದೆ. ಕಾಯ್ದೆ ಜಾರಿಯಾದ್ರೆ ಪ್ರತಿಭಟನೆ ಉಗ್ರ ಸ್ವರೂಪ ತಾಳುತ್ತದೆ' ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. 

ಈವರೆಗೆ ಕೃಷಿಕರಿಗೆ ಮಾತ್ರ ಜಮೀನು ಖರೀದಿಸುವ ಅವಕಾಶ ಇತ್ತು. ಈಗ ಕಾಯ್ದೆ ತಿದ್ದುಪಡಿಯಿಂದ ಕೃಷಿಕರಲ್ಲದವರೂ ಜಮೀನು ಖರೀದಿಸಬಹುದು. ಒಂದು ವೇಳೆ ಉದ್ಯಮಿಗಳು ಖರೀದಿಸಿದರೆ ರೈತರಿಗೆ ಕಷ್ಟವಾಗುತ್ತದೆ' ಎಂಬುದು ಇವರ ವಾದ.