Aug 23, 2020, 11:45 AM IST
ಮೈಸೂರು (ಆ. 23): ವೈದ್ಯಾಧಿಕಾರಿ ಡಾ. ನಾಗೇಂದ್ರ ಸಾವಿನ ಪ್ರಕರಣವನ್ನು ಖಂಡಿಸಿ ಕಳೆದೆರಡು ದಿನಗಳಿಂದ ಮೈಸೂರಿನಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮೈಸೂರಿನಲ್ಲಿ ವೈದ್ಯಾಧಿಕಾರಿಗಳ ಸಭೆ ನಡೆಯಲಿದ್ದು ಪ್ರತಿಭಟನೆಯ ಮುಂದಿನ ರೂಪುರೇಷೆಗಳ ಬಗ್ಗೆ, ಮುಂದಿನ ಕ್ರಮಗಳ ಬಗ್ಗೆ ತೀರ್ಮಾನವಾಗಲಿದೆ.
ಕಳೆದ 2 ದಿನಗಳಿಂದ ಆರೋಗ್ಯ ಇಲಾಖೆ ಕೋವಿಡ್ ವರದಿಯನ್ನೇ ಸಲ್ಲಿಸಿಲ್ಲ. ಕೋವಿಡ್ ಟೆಸ್ಟ್, ಚಿಕಿತ್ಸೆ ಕೂಡಾ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ವೈದ್ಯರ ಪ್ರತಿಭಟನೆಯಿಂದ ರೋಗಿಗಳು ಪರದಾಡುವಂತಾಗಿದೆ.
ಡಾ. ನಾಗೇಂದ್ರ ಸಾವಿನ ಪ್ರಕರಣಕ್ಕೆ ಪೊಲಿಟಿಕಲ್ ಟ್ವಿಸ್ಟ್; ವೈದ್ಯರ ಹೋರಾಟಕ್ಕೆ 'ಕೈ' ಸಾಥ್?