Apr 6, 2023, 1:25 PM IST
ಬೆಂಗಳೂರು (ಏ.06): ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಬಿಎಂಪಿಯಲ್ಲಿ ನಡೆದ ಭಾರೀ ಅಕ್ರಮ ಬಯಲಾಗಿದೆ. ಕಸ ವಿಲೇವಾರಿ ಹೆಸರಿನಲ್ಲಿ ಕೋಟಿ ಕೋಟಿ ಕೊಳ್ಳೆಹೊಡೆದ ಖದೀಮರ ಬಂಡವಾಳವನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬಯಲು ಮಾಡುತ್ತಿದೆ. ಹೌದು! ಕಸ ವಿಲೇವಾರಿ ಹೆಸರಿನಲ್ಲಿ ಬಿಬಿಎಂಪಿಯಲ್ಲಿ ಬಹುದೊಡ್ಡ ಹಗರಣವು ನಡೆದಿದ್ದು, ಖದೀಮರು ಕೋಟಿ ಕೋಟಿ ಕನ್ನ ಹಾಕಿದ್ದಾರೆ. ಇದೀಗ ಡಸ್ಟ್‌ಬಿನ್ ಹೆಸರಿನಲ್ಲಿ ಕೋಟಿ ಹಣವನ್ನು ಕೊಳ್ಳೆ ಹೊಡೆದವರ ಜಾತಕ ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿದ್ದು, ಈ ಬಗ್ಗೆ ದೂರು ಸಲ್ಲಿಕೆಯಾಗಿದೆ. ಹೀಗಾಗಿ ಹಗರಣದ ಬಗ್ಗೆ ಪ್ರಧಾನಿ ಕಾರ್ಯಾಲಯ ಮಾಹಿತಿಯನ್ನು ಕಲೆ ಹಾಕಿದೆ. ಅಕ್ರಮದ ಜಾಡು ಪತ್ತೆಗೆ ಪ್ರಧಾನಿ ಕಚೇರಿ ಅಧಿಕಾರಿಗಳು ಮುಂದಾಗಿದೆ. ಏನಿದು ಅಕ್ರಮ ಇದರ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ.