ಕಾಂಗ್ರೆಸ್‌ಗೆ ಸಾಫ್ಟ್, ಹಾರ್ಡ್‌ ಹಿಂದುತ್ವ ಎಂದಿಲ್ಲ, ಹಿಂದೂ ಧರ್ಮದಲ್ಲಿ ನಂಬಿಕೆ ಇದೆ: ಸಿದ್ದರಾಮಯ್ಯ

Mar 19, 2022, 4:34 PM IST

ಬೆಂಗಳೂರು (ಮಾ, 19): ಭಗವದ್ಗೀತೆಯನ್ನಾದರೂ ಹೇಳಿಕೊಳ್ಳಲಿ, ಕುರಾನ್ ಆದರೂ ಹೇಳಿಕೊಳ್ಳಲಿ, ಬೈಬಲ್‌ನಾದ್ರೂ ಹೇಳಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು, ಮಕ್ಕಳನ್ನು ಗುಣಮಟ್ಟದ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಕು. ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸುತ್ತೇವೆ ಎಂದು ಸರ್ಕಾರ ಹೇಳಿಲ್ಲ, ಚರ್ಚೆಯಾಗುತ್ತಿದೆ. ನಮ್ಮದು ಬಹುಸಂಸ್ಕೃತಿ ಇರುವ ದೇಶ. ನಾವೆಲ್ಲರೂ ಸಹಿಷ್ಣುತೆ, ಸಹಬಾಳ್ವೆಯಿಂದ ಬದುಕಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Bhagavad Gita: ಭಗವದ್ಗೀತೆ ಒಂದು ಧರ್ಮದ ಗ್ರಂಥವಲ್ಲ, ಎಲ್ಲರೂ ಓದಬೇಕಾದ ಪುಸ್ತಕ: ಪ್ರತಾಪ್ ಸಿಂಹ

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಸಾಫ್ಟ್ ಹಿಂದುತ್ವದ ಮೊರೆ ಹೋಗುತ್ತಿದೆಯಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ,  ಕಾಂಗ್ರೆಸ್ ಸಾಫ್ಟ್‌ ಹಿಂದುತ್ವವೂ ಇಲ್ಲ, ಹಾರ್ಡ್ ಹಿಂದುತ್ವವೂ ಇಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವರು.  ಎಲ್ಲಾ ಧರ್ಮವನ್ನು ಸಮನಾಗಿ ನೋಡುತ್ತೇವೆ' ಎಂದರು.